ಜಪಾನ್ ದೇಶ​ದ 100ನೇ ಪ್ರಧಾನಿಯಾಗಿ ʼಫುಮಿಯೋ ಕಿಶಿಡಾʼ ಅಧಿಕಾರ ಸ್ವೀಕಾರ : ಪ್ರಧಾನಿ ಮೋದಿ ಅಭಿನಂದನೆ

ಜಪಾನ್ ದೇಶ​ದ 100ನೇ ಪ್ರಧಾನಿಯಾಗಿ ʼಫುಮಿಯೋ ಕಿಶಿಡಾʼ ಅಧಿಕಾರ ಸ್ವೀಕಾರ : ಪ್ರಧಾನಿ ಮೋದಿ ಅಭಿನಂದನೆ

ಡಿಜಿಟಲ್‌ ಡೆಸ್ಕ್:‌ ಯೋಶಿಹಿದೆ ಸುಗಾ ರಾಜೀನಾಮೆ ಬೆನ್ನಲ್ಲೇ ಫುಮಿಯೋ ಕಿಶಿಡಾ ಅವ್ರು ಇಂದು ಜಪಾನ್​ನ 100ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನಿವ್ರು ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರ ಮಾಡಲಿದೆ ಎನ್ನಲಾಗ್ತಿದ್ದು, ಇನ್ನಿವ್ರಿಗೆ ಪ್ರಧಾನಿ ಮೋದಿಯವ್ರು ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ, 'ವಿಶೇಷ ಕಾರ್ಯತಂತ್ರ, ಜಾಗತಿಕ ಪಾಲುದಾರಿಕೆ, ಶಾಂತಿ ಬಲಪಡಿಸುವ ನಿಟ್ಟಿನಲ್ಲಿ ಫುಮಿಯೋ ಕಿಶಿಡಾ ಅವರೊಟ್ಟಿಗೆ ಸೇರಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಟ್ವೀಟ್‌ ಮಾಡಿದ್ದಾರೆ.