ಹಿಂದೂಗಳ ಮುಕ್ತ ಪೀಠವಾಗಲಿ ಎಂದು ವಿಶೇಷ ಪೂಜೆ.
ಧಾರವಾಡ.
ದತ್ತ ಪೀಠದಲ್ಲಿ ಕೋರ್ಟ್ ನೀಡಿರುವ ತೀರ್ಪಿಗೆ ಸ್ವಾಗತಿಸಿ ಹಾಗೂ ದತ್ತಪೀಠ ಆದಷ್ಟು ಬೇಗ ಹಿಂದೂಗಳ ಮುಕ್ತ ಪೀಠವಾಗಲಿ ಎಂದು ಪ್ರಾರ್ಥಿಸಿ, ಶ್ರೀ ರಾಮ ಸೇನೆ ಕಾರ್ಯಕರ್ತರು ಧಾರವಾಡ ದತ್ತಾತ್ರೇಯ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಗಾಂಧಿ ಚೌಕ ಮಾರುಕಟ್ಟೆಯ ಬಳಿ ಇರುವ ದತ್ತಾತ್ರೇಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂಜೆಯಲ್ಲಿ ಪಾಲ್ಗೊಂಡು ದತ್ತಾತ್ರೇಯರಿಗೆ ಜಯ ಘೋಷಣೆ ಕೂಗುತ್ತ ಜನರಿಗೆ ಸಿಹಿ ಹಂಚಿ ಸಂಭ್ರಮ ಸಡಗರದಿಂದ ಈ ಕಾರ್ಯಕ್ರಮದಲ್ಲಿ ಶ್ರೀ ರಾಮ ಸೇನೆ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ರು.