13ನೇ ಬ್ರಿಕ್ಸ್ ಶೃಂಗಸಭೆ : ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ

13ನೇ ಬ್ರಿಕ್ಸ್ ಶೃಂಗಸಭೆ : ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು 13 ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವರ್ಚುಯಲ್ ವಿಧಾನದಲ್ಲಿ ಸಭೆ ನಡೆಯಲಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಾಫೋಸಾ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿರಂತರತೆ, ಬಲವರ್ಧನೆ ಮತ್ತು ಸಾಮರಸ್ಯಕ್ಕಾಗಿ ಆಂತರಿಕ-ಬ್ರಿಕ್ಸ್ ಸಹಕಾರ ಎಂಬುದು ಈ ಬಾರಿ ಸಭೆಯ ಥೀಮ್ ಆಗಿದೆ.
ಸಭೆಯಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರದ ಬದಲಾವಣೆಗಳು, ಮುಂದೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು.

ಅಫ್ಘಾನಿಸ್ತಾನದ ಇಂದಿನ ಸ್ಥಿತಿ ಸೇರಿದಂತೆ ಹಲವು ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಚರ್ಚೆ ನಡೆಯಲಿದೆ. ಉಗ್ರವಾದದ ವಿರುದ್ಧದ ಹೋರಾಟದ ಬಗ್ಗೆ ಹೆಚ್ಚು ಮಾತುಕತೆಯಾಗುವ ಸಂಭವ ಇದೆ.