ವಕೀಲನ ಸಲಿಂಗ ಕಾಮಕ್ಕೆ ಬಲಿಯಾದ ಬಾಲಕನ ಶವಕ್ಕಾಗಿ ಕೆರೆಯಲ್ಲಿ ಶೋಧ

ವಕೀಲನ ಸಲಿಂಗ ಕಾಮಕ್ಕೆ ಬಲಿಯಾದ ಬಾಲಕನ ಶವಕ್ಕಾಗಿ ಕೆರೆಯಲ್ಲಿ ಶೋಧ

ಹಾರೋಹಳ್ಳಿ: ವಕೀಲರೊಬ್ಬರ ಸಲಿಂಗ ಕಾಮಕ್ಕೆ ಬಲಿಯಾದ ಬಾಲಕನ ಮೃತದೇಹದ ಪತ್ತೆಗಾಗಿ ಮಂಗಳೂರಿನ ಮುಳುಗು ತಜ್ಞರಿಂದ ಶನಿವಾರ ಗಬ್ಬಾಡಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಯಿತು.

ಮಗ ಕಾಣೆಯಾಗಿರುವ ಬಗ್ಗೆ ತಾಯಿ ಹತ್ತು ತಿಂಗಳ ಹಿಂದೆ ಕನಕಪುರ ಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ವಕೀಲ ಶಂಕರೇಗೌಡ ಮತ್ತು ಆತನ ಸ್ನೇಹಿತ ಅರುಣ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಾಲಕನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿರುವ ವಿಷಯವನ್ನು ತಿಳಿಸಿ ದ್ದರು. ಕೃತ್ಯದ ನಂತರ ಬಾಲಕನನ್ನು ಮನೆಗೆ ಕಳಿಸಿದ್ದೇವೆ ಮುಂದೆ ಏನಾಯಿತು ಗೊತ್ತಿಲ್ಲ ಎಂದು ಆರೋಪಿಗಳು ಹೇಳಿಕೆ ನೀಡಿದ್ದರು.

ಬಾಲಕನ ಬಗ್ಗೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಗಬ್ಬಾಡಿ ಕೆರೆ ಮತ್ತು ಸಾತನೂರಿನ ದಾಳಿಂಬ ಬಾವಿಗೆ ಎಸೆದಿರುವ ಸಂಗತಿಯು ಮಂಪರು ಪರೀಕ್ಷೆ ವೇಳೆ ಬಯಲಾಗಿದೆ.

ಸಿಪಿಐ ಕೃಷ್ಣ ಲಮಾಣಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.