ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಸ್ಥಾನದ ಕಿತ್ತಾಟ ತಾರಕಕ್ಕೇರಿದೆ.

ಧಾರವಾಡ.

ಧಾರವಾಡ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಸ್ಥಾನದ ಕಿತ್ತಾಟ ತಾರಕಕ್ಕೇರಿದೆ, ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಬಣಗಳ ನಡುವೆ ಕಿತ್ತಾಟ ನಡೆದಿದ್ದು. ಇನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಪ್ತ ಅಧ್ಯಕ್ಷನಾಗಿರೋ ಹಿಂದಿ ಪ್ರಚಾರ ಸಭಾ, ಕೇಂದ್ರ ಸರ್ಕಾರ ಸೂಪರ್ ಸೀಡ್ ಮಾಡಿತ್ತು. 2020 ರಲ್ಲಿ ಆಡಳಿತಕ್ಕೆ ಬಂದಿದ್ದ ಹೊಸ ಆಡಳಿತ ಮಂಡಳಿ ಈರೇಶ ಅಂಚಟಗೇರಿ ವಿರುದ್ಧ ಅಸಮಾಧಾನ ತೋರಿದ್ದಾರೆ. ಮಲ್ಲಪ್ಪ ಪುಡಲಕಟ್ಟಿ ಹಾಗೂ ಇತರರಿಂದ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ. 78 ಸದಸ್ಯರನ್ನು ಒಳಗೊಂಡ ಹಿಂದಿ ಪ್ರಚಾರ ಸಭಾ ಅಂಚಟಗೇರಿ ಆಯ್ಕೆ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಇನ್ನೊಂದ ಬಣ, 13 ಜನ ಸದಸ್ಯರಿಂದ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಈಗಿನ ಆಡಳಿತ ಮಂಡಳಿಯ ಅಧಿಕಾರಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್, ಮಲ್ಲಪ್ಪ ಪುಡಲಕಟ್ಟಿ ಬಣದ ವಿರುದ್ಧ ದೂರು ನೀಡಿದ್ದಾರೆ. ಉಪನಗರ ಠಾಣೆಯಲ್ಲಿ ದೂರು ದಾಖಲಿಸಿರುವ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಅವರಿಂದ ದೂರು ದಾಖಲು ಮಾಡಿಕೊಂಡಿದ್ದಾರೆ. ದೂರು ದಾಖಲಾದ ಹಿನ್ನೆಲೆಯಾಗಿ ಹಿಂದಿ ಪ್ರಚಾರ ಸಭಾ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಎಸಿಪಿ ಅನುಷಾ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.