ಹುಬ್ಬಳ್ಳಿಯಂತಹ ದೊಡ್ಡ ಸಿಟಿಯಲ್ಲಿ'' ಮರ್ಡರ್ ಕಾಮನ್: ಕಮೀಷನರ್ ರಮನ್ ಗುಪ್ತಾ ಹೇಳಿಕೆ!

ಹುಬ್ಬಳ್ಳಿಯಂತಹ ದೊಡ್ಡ ಸಿಟಿಯಲ್ಲಿ'' ಮರ್ಡರ್ ಕಾಮನ್: ಕಮೀಷನರ್ ರಮನ್ ಗುಪ್ತಾ ಹೇಳಿಕೆ!

ಹುಬ್ಬಳ್ಳಿ : 

ಹುಬ್ಬಳ್ಳಿಯ ನೇಕಾರನಗರದಲ್ಲಿ ನಿನ್ನೆ ಹಾಡುಹಗಲೇ ನಾಗರಾಜ ಚಲವಾದಿ ಎಂಬ ಯುವಕನ ಕೊಲೆ ನಡೆದಿದೆ. ಈ  ವಿಚಾರಕ್ಕೆ ಸಂಬಂಧಿಸಿದಂತೆ ಕಮಿಷನರ್ ರಮನ್ ಗುಪ್ತಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಆತಂಕ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಂತ ದೊಡ್ಡ ನಗರದಲ್ಲಿ ಎರಡು ತಿಂಗಳಿಗೊಮ್ಮೆ ಕೊಲೆಗಳು ಆಗುವುದು ಸಹಜ ಇದರಿಂದ ಯಾವುದೇ ರೀತಿಯಾದ ಕಾನೂನು ಸುವ್ಯಸ್ಥೆಗೆ ದಕ್ಕೆ ಬರುವುದಿಲ್ಲ ಈಗಾಗಲೇ ಈ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಏನೂ ಹೇಳಲು ಬರೋದಿಲ್ಲ . ಕೊಲೆಗೆ ಏನು ಕಾರಣ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು ಸಮಗ್ರವಾಗಿ ತನಿಖೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.ಆದರೆ ಕಮೀಷನರ್ ಹೇಳಿಕೆ ಈಗ ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂ ಕಾನೂನು ಸುವ್ಯವಸ್ಥೆ ಒಂದು ಕಡೆ ಹದಗೆಡುತ್ತಿದೇಯಾ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.