ಜನಪದ ಗಾಯಕನ ಕೊಂದ ತಾಲಿಬಾನ್ ಉಗ್ರರು
ಜನಪದ ಗಾಯಕನ ಕೊಂದ ತಾಲಿಬಾನ್ ಉಗ್ರರು
ತಾಲಿಬಾನ್ ಉಗ್ರಗಾಮಿ ಅಫಘಾನಿಸ್ತಾನದ ಜಾನಪದ ಗಾಯಕನನ್ನು ಪ್ರಕ್ಷುಬ್ಧ ವಾತಾವರಣವಿದ್ದ ಪರ್ವತ ಪ್ರಾಂತ್ಯದಲ್ಲಿ ಗುಂಡಿಕ್ಕಿ ಕೊಂದಿದ್ದಾನೆ. ಈ ವಿಚಾರವನ್ನು ಫವಾದ್ ಅಂದರಬಿಯವರ ಕುಟುಂಬದ ಸದಸ್ಯರು ಭಾನುವಾರ ಹೇಳಿದ್ದಾರೆ.
ತಾಲಿಬಾನಿಗಳು ಸರ್ಕಾರವನ್ನು ಉರುಳಿಸಿದ ನಂತರ ಈ ದಂಗೆಕೋರರು ದೇಶದಲ್ಲಿ ತಮ್ಮ ದಬ್ಬಾಳಿಕೆಯನ್ನು ಮತ್ತೆ ಮಾಡುತ್ತಾರೆ ಎನ್ನುವ ಆತಂಕ ಈ ಜನಪದ ಗಾಯಕನ ಹತ್ಯೆಯ ನಂತರ ಮತ್ತೆ ಆವರಸಿದೆ ಎಂದು ಹೇಳಲಾಗುತ್ತಿದೆ. ಅಂದರಬಿ ಕಣಿವೆಯಲ್ಲಿ ಈ ಹತ್ಯೆ ಶುಕ್ರವಾರ ಸಂಭವಿಸಿದ್ದು, ಆದ ಕಾರಣ ಆ ಕಣಿವೆಗೆ ಮರಣ ಹೊಂದಿದ ಗಾಯಕನ ಹೆಸರನ್ನೇ ಇಡಲಾಗಿದೆ ಎಂದು ವರದಿಯಾಗಿದೆ.
ಈ ಹತ್ಯೆಯು ನಡೆದ ಸ್ಥಳ ಕಾಬೂಲ್‌ನ ಉತ್ತರಕ್ಕೆ 60 ಮೈಲಿ ಬಾಗ್ಲಾನ್ ಪ್ರಾಂತ್ಯದ ಪ್ರದೇಶದಲ್ಲಿದೆ. ಈ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ತಾಲಿಬಾನ್ ಆಳ್ವಿಕೆಯನ್ನು ವಿರೋಧಿಸಿದ ಸೇನಾ ಹೋರಾಟಗಾರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ತಾಲಿಬಾನ್ ಉಗ್ರರು ಈ ಹಿಂದೆ ಅಂದರಬಿಯ ಮನೆಗೆ ಬಂದು ಅವರನ್ನು ಹುಡುಕುತ್ತಿತ್ತು ಹಾಗೂ ನಮ್ಮ ಸಂಗೀತಗಾರ ತಂದೆಯ ಜೊತೆಗೆ ಚಹಾ ಕೂಡ ಕುಡಿಯುತ್ತಿದ್ದರು ಎಂದು ಅವರ ಮಗ ಜವಾದ್ ಅಂದರಬಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು. ಆದರೆ ಶುಕ್ರವಾರ ಏನೋ ಬೇರೆಯದೇ ಘಟನೆ ನಡೆದಿದೆ ಆದ ಕಾರಣ ಈ ಹತ್ಯೆ ನಡೆದಿದೆ ಎಂದು ಹೇಳಿದ್ದಾರೆ.
ಈ ಹಾಡುಗಾರನ ಮಗ ತನಗೆ ನ್ಯಾಯ ಬೇಕೆಂದು ಪಟ್ಟು ಹಿಡಿದಿದ್ದು, ಇದಕ್ಕೆ ಸ್ಥಳೀಯ ತಾಲಿಬಾನ್ ಕೌನ್ಸಿಲ್ ತನ್ನ ತಂದೆಯ ಕೊಲೆಗಾರನನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದೆ, ಈ ನಿರ್ಧಾರ ಸಮಾಧಾನ ತಂದಿದೆ ಎಂದು ಹೇಳಿದರು.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಎಪಿ ಸುದ್ದಿ ಸಂಸ್ಥೆಗೆ ಈ ವಿಚಾರವಾಗಿ ಮಾತನಾಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ, ಆದರೆ ಹತ್ಯೆಯ ಬಗ್ಗೆ ಯಾವುದೇ ವಿವರಗಳು ಸರಿಯಾಗಿ ಲಭ್ಯವಿಲ್ಲ ಎಂದರು.
ತಾಲಿಬಾನ್‌ಗಳು 1990 ರ ಉತ್ತರಾರ್ಧದಲ್ಲಿ ಇಸ್ಲಾಮಿಕ್ ಆಳ್ವಿಕೆಯ ಕಟ್ಟುನಿಟ್ಟಾದ ಕಾನೂನುಗಳನ್ನು ಹೇರಿದ್ದಕ್ಕಿಂತಲೂ ಬೇರೆಯದೆ ರೂಪದಲ್ಲಿ ನಾವು ಈಗ ಆಳ್ವಿಕೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅನೇಕ ಆಫ್ಘನ್ ನಾಗರೀಕರು ಸಂಶಯದಿಂದಲೇ ತಾಲಿಬಾನ್ ಉಗ್ರರನ್ನು ನೋಡುತ್ತಿದ್ದಾರೆ.
ಇವರ ಮೇಲೆ ಜನರಿಗೆ ಎಷ್ಟು ಅಪನಂಬಿಕೆ ಇದೆ ಎಂದರೆ ಸಾವಿರಾರು ಜನರು ವಿಮಾನ ನಿಲ್ದಾಣಕ್ಕೆ ಓಡಿಹೋದರು, ದೇಶದಿಂದ ಪಲಾಯನ ಮಾಡಲು ದಾರಿ ಕಾಣದೆ ಹತಾಶರಾದರು.