ದೇಶದ 22 ರಾಜ್ಯಗಳಲ್ಲಿ ನಾವು ವ್ಯಾಪಾರ ಮಾಡ್ತೇವೆ, ಅಲ್ಲೆಲ್ಲೂ ಬಿಜೆಪಿ ಆಳ್ವಿಕೆಯಿಲ್ಲ: ಕಾಂಗ್ರೆಸ್‌ ಟೀಕೆಗೆ ಉದ್ಯಮಿ ಅದಾನಿ ಪ್ರತಿಕ್ರಿಯೆ

ದೇಶದ 22 ರಾಜ್ಯಗಳಲ್ಲಿ ನಾವು ವ್ಯಾಪಾರ ಮಾಡ್ತೇವೆ, ಅಲ್ಲೆಲ್ಲೂ ಬಿಜೆಪಿ ಆಳ್ವಿಕೆಯಿಲ್ಲ: ಕಾಂಗ್ರೆಸ್‌ ಟೀಕೆಗೆ ಉದ್ಯಮಿ ಅದಾನಿ ಪ್ರತಿಕ್ರಿಯೆ

ವದೆಹಲಿ: ಬ್ಯಾಂಕ್ ಸಾಲ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಮೋದಿ ಸರಕಾರ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಉದ್ಯಮಿ ಗೌತಮ್ ಅದಾನಿ ಶನಿವಾರ ಪ್ರತ್ಯುತ್ತರ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅದಾನಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಿಕಟ ಸಂಪರ್ಕದಿಂದ ತಮ್ಮ ಅದೃಷ್ಟವನ್ನು ಉತ್ತೇಜಿಸಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಆದ್ರೆ, ವಿಪಕ್ಷಗಳ ಆಡಳಿತವಿರುವ ರಾಜ್ಯಗಳೊಂದಿಗೆ ಕೆಲಸ ಮಾಡುವುದರಿಂದ ಇದನ್ನು ನಿರಾಕರಿಸಲಾಗಿದೆ. ನಾವು ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ. ಇಂದು 22 ರಾಜ್ಯಗಳಲ್ಲಿ ಅದಾನಿ ಗ್ರೂಪ್ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಮತ್ತು ಈ ಎಲ್ಲಾ ರಾಜ್ಯಗಳು ಬಿಜೆಪಿ ಆಳ್ವಿಕೆಯಲ್ಲಿಲ್ಲ. ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಹೇಳಬಲ್ಲೆ. ನಾವು ಕೇರಳ, ಮಮತಾ ದೀದಿಯವರ ಪಶ್ಚಿಮ ಬಂಗಾಳದಲ್ಲಿ, ನವೀನ್ ಪಟ್ನಾಯಕ್ ಜಿ ಅವರ ಒಡಿಶಾದಲ್ಲಿ, ಜಗನ್ಮೋಹನ್ ರೆಡ್ಡಿ ಅವರ ರಾಜ್ಯ ಆಂಧ್ರದಲ್ಲಿ, ಕೆಸಿಆರ್ ಅವರ ತೆಲಂಗಾಣ ರಾಜ್ಯದಲ್ಲೂ ಸಹ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್ ದೇಶದ ಉಸ್ತುವಾರಿಯಲ್ಲಿದ್ದಾಗಲೇ ಕುಲಾಯಿಸಿದ ಯಶಸ್ಸು

'ನಾನು ನನ್ನ ಜೀವನದಲ್ಲಿ ಮೂರು ದೊಡ್ಡ ಬ್ರೇಕ್‌ಗಳನ್ನು ಪಡೆದುಕೊಂಡಿದ್ದೇನೆ. ಮೊದಲನೆಯದಾಗಿ, 1985 ರಲ್ಲಿ ರಾಜೀವ್ ಗಾಂಧಿಯವರ ಆಳ್ವಿಕೆಯಲ್ಲಿ, ಎಕ್ಸಿಮ್ ನೀತಿಯು ನಮ್ಮ ಕಂಪನಿಯನ್ನು ಜಾಗತಿಕ ವ್ಯಾಪಾರ ಸಂಸ್ಥೆಯಾಗಲು ಅವಕಾಶ ಮಾಡಿಕೊಟ್ಟಾಗ, ಎರಡನೆಯದಾಗಿ, 1991 ರಲ್ಲಿ ಪಿವಿ ನರಸಿಂಹ ರಾವ್ ಮತ್ತು ಡಾ ಮನಮೋಹನ್ ಸಿಂಗ್ ಆರ್ಥಿಕತೆಯನ್ನು ತೆರೆದಾಗ ಮತ್ತು ನಾವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೋಡ್‌ಗೆ ಪ್ರವೇಶಿಸಿದ್ದೇವೆ ಮತ್ತು ಮೂರನೆಯದಾಗಿ, ಗುಜರಾತ್‌ನಲ್ಲಿ ನರೇಂದ್ರ ಮೋದಿಯವರ 12 ವರ್ಷಗಳ ಸುದೀರ್ಘ ಆಳ್ವಿಕೆಯಲ್ಲಿ' ಎಂದು ತಿಳಿಸಿದ್ದಾರೆ.