ಕಾಲಿಗೆ ಬಿದ್ದು ಕೇಳ್ತೀನಿ, ಇದೊಂದು ಸಲ ದಯವಿಟ್ಟು ಕ್ಷಮಿಸಿ!; ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ತತ್ತರಿಸಿದ ಕಿಡಿಗೇಡಿ
ಬೆಂಗಳೂರು: ಇರಲಾರದೆ ಇರುವೆ ಬಿಟ್ಕೊಂಡ ಎಂಬಂತಾಗಿದೆ ಇಲ್ಲೊಬ್ಬ ಕಿಡಿಗೇಡಿಯ ಪರಿಸ್ಥಿತಿ. ಪವರ್ಸ್ಟಾರ್ ಪುನೀತ್ ರಾಜಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕಿಡಿಗೇಡಿಯೊಬ್ಬ ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ಯಾವ ಪರಿ ತತ್ತರಿಸಿ ಹೋಗಿದ್ದಾನೆಂದರೆ, 'ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ, ಬಿಟ್ಟು ಬಿಡಿ' ಎಂದು ಕೇಳಿಕೊಂಡಿದ್ದಾನೆ.
ಲಿಂಗದೇವರುಕೊಪ್ಪಲಿನ ಪುಟ್ಟ ಎಂಬ ಈತ ಪುನೀತ್ ರಾಜಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಅದರ ವಿಡಿಯೋ ಕೂಡ ಮಾಡಿಕೊಂಡಿದ್ದ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ಪುಟ್ಟನ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಇದರಿಂದ ಕಂಗಾಲಾದ ಕಿಡಿಗೇಡಿ ಅಪ್ಪು ಫೋಟೋಗೆ ಪೂಜೆ ಮಾಡಿ ಕ್ಷಮೆ ಕೋರಿದ್ದಲ್ಲದೆ, ಇದೊಂದು ಸಲ ಬಿಟ್ಟು ಬಿಡಿ, ಇನ್ಯಾವತ್ತೂ ಇಂಥ ತಪ್ಪು ಮಾಡಲ್ಲ ಎಂದು ಬೇಡಿಕೊಂಡಿದ್ದಾನೆ.
ನಿಜವಾಗ್ಲೂ ಲೈಫಲ್ಲಿ ಇನ್ನು ಈ ಥರ ತಪ್ಪು ಮಾಡಲ್ಲ, ದಯವಿಟ್ಟು ಕ್ಷಮಿಸಿ.. ಇನ್ನೊಂದ್ಸಲ ತಪ್ಪು ಆಗಲ್ಲ. ಇನ್ನು ಯಾವುದೇ ನಟರ ಬಗ್ಗೆ ಇನ್ನು ಈ ರೀತಿ ಮಾತಾಡಲ್ಲ. ಲೈಫಲ್ಲಿ ಇದೊಂದು ಚಾನ್ಸ್ ಕೊಡಿ, ಕಾಲಿಗೆ ಬಿದ್ದು ಕೇಳ್ತೀನಿ. ಅಪ್ಪ-ಅಮ್ಮ ತುಂಬ ಹೆದರಿಕೊಂಡಿದ್ದಾರೆ, ದಯವಿಟ್ಟು ಕ್ಷಮಿಸಿ, ಕಾಲಿಗೆ ಬೀಳ್ತೀನಿ, ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾನೆ.