ಮಂಡ್ಯದಲ್ಲಿ 6 ಮೇಕೆಗಳನ್ನು ಕೊಂದು, 4 ಮೇಕೆಗಳನ್ನು ಹೊತ್ತುಹೊಯ್ದು ಚಿರತೆ : ಗ್ರಾಮಸ್ಥರಿಗೆ ಆತಂಕ

ಮಂಡ್ಯದಲ್ಲಿ 6 ಮೇಕೆಗಳನ್ನು ಕೊಂದು, 4 ಮೇಕೆಗಳನ್ನು ಹೊತ್ತುಹೊಯ್ದು ಚಿರತೆ : ಗ್ರಾಮಸ್ಥರಿಗೆ ಆತಂಕ

ಮಂಡ್ಯ : ಜಿಲ್ಲೆಯ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ಕುರಿಗಾಗಿ ನಿರ್ಮಿಸಿದ ಕೊಟ್ಟಿಗೆಗೆ ಚಿರತೆಗಳು ದಾಳಿ ಮಾಡಿದ್ದು, ಕೊಟ್ಟಿಗೆಯಲ್ಲಿದ್ದ 6 ಮೇಕೆಗಳನ್ನು ಕೊಂದು ಅದರಲ್ಲಿ 4 ಮೇಕೆಗಳನ್ನು ಹೊತ್ತು ಹೊಯ್ದುರುವ ಘಟನೆ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಗಿರಿಯಾರಗಳ್ಳಿಯ ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆ ಗಳನ್ನು ಕಟ್ಟಿದ್ದರು. 18 ಮೇಕೆಗಳ ಪೈಕಿ 6 ಮೇಕೆಗಳಿಗೆ ಕಚ್ಚಿ ಅವುಗಳ ರಕ್ತ ಕುಡಿದು ಅರ್ಧ ಮಾಂಸವನ್ನು ತಿಂದಿವೆ. ಅಲ್ಲದೇ ಇನ್ನೂ 4 ಮೇಕೆಗಳನ್ನು ಚಿರತೆ ಗಳು ಹೊತ್ತಕೊಂಡು ಹೋಗಿದೆ ಎಂಬ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ

ಈ ಘಟನೆ ತಿಳಿದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಎರಡರಿಂದ ಮೂರು ಚಿರತೆಗಳು ದಾಳಿ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಸ್ಥಳೀಯ ಶಾಸಕ ಪುಟ್ಟರಾಜು ಭೇಟಿ ನೀಡಿ, ರೈತನಿಗೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಅರಣ್ಯಾಧೀಕಾರಿಗಳು ಕ್ಲಾಸ್‌ ತೆಗೆದುಕೊಂಡು ಕೂಡಲೇ ಚಿರತೆ ಸೆರೆಗಾಗಿ ಬೋನ್ ಇಡುವಂತೆ ಎಚ್ಚರಿಕೆ ನೀಡಲಾಗಿದೆ.