ಕಲ್ಲು ಕ್ವಾರಿಗಳ ಸಕ್ರಮಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು

ಕಲ್ಲು ಕ್ವಾರಿಗಳ ಸಕ್ರಮಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು

ಬೆಂಗಳೂರು : ಗುತ್ತಿಗೆ ಪಡೆದ ಪ್ರದೇಶ ಬಿಟ್ಟು ಪಕ್ಕದಲ್ಲಿ ನಡೆಸುತ್ತಿರುವ ಕಲ್ಲು ಕ್ವಾರಿಯನ್ನು ಸಕ್ರಮ ಮಾಡಲು ರಾಜ್ಯ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಯಂತ್ರ ಬಳಸದೇ ಕಲ್ಲು ಕ್ವಾರಿ ಮಾಡುವವರು ತಮಗೆ ಗುತ್ತಿಗೆ ಮಂಜೂರಾದ ಪ್ರದೇಶವನ್ನು ಬಿಟ್ಟು ಗೊತ್ತಿಲ್ಲದೇ ಪಕ್ಕದಲ್ಲಿ ಆಕಸ್ಮಿಕವಾಗಿ ಕ್ವಾರಿ ನಡೆಸಿದರೆ ಅಂತಹ ಪ್ರದೇಶವನ್ನು ಮರು ಹೊಂದಾಣಿಕೆ ಮಾಡಲಾಗುತ್ತದೆ ಎಂದರು.

ಮಂಜೂರಾದ ಮೂಲ ಗುತ್ತಿಗೆ ಪ್ರದೇಶ ಬಿಟ್ಟು ಕಲ್ಲುಕ್ವಾರಿ ನಡೆಸುವ ಪ್ರದೇಶವನ್ನು ಸಕ್ರಮಗೊಳಿಸಲಾಗುತ್ತದೆ, ಗಣಿಗಾರಿಕೆ ಮಾಡದೇ ಉಳಿದ ಮೂಲ ಗುತ್ತಿಗೆ ಪ್ರದೇಶವನ್ನು ವಾಪಸ್ ಪಡೆಯಲಾಗುತ್ತದೆ ಎಂದರು.

ಅದೇ ರೀತಿ ಜಲಜೀವನ್ ಮಿಷನ್ ಅಡಿಯಲ್ಲಿ ಶಿವಮೊಗ್ಗ ತಾಲೂಕಿನ ಆನವೇರಿ ಮತ್ತು ಇತರೆ 23 ಗ್ರಾಮಗಳಿಗೆ7 26.62 ಕೋಟಿ ಅಂದಾಜು ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹೆಚ್ಚುವರಿಯಾಗಿ 54.60 ಕೋಟಿ ಷೇರು ಬಂಡವಾಳ ಬಿಡುಗಡೆಗೆ ಒಪ್ಪಿಗೆ,ಬೆಂಗಳೂರು ನಗರದ ಕಲಾಸಿಪಾಳ್ಯದಲ್ಲಿ 63.17 ಕೋಟಿ ವೆಚ್ಚದಲ್ಲಿ ನವೀನ ಮಾದರಿಯಲ್ಲಿ ನಿರ್ಮಿಸಿರುವ ಬಸ್ ಟರ್ಮಿನಲ್ ಕಾಮಗಾರಿಗೆ ಘಟನೋತ್ತರ ಅನುಮೋದನೆ. ಬಾಲ್ಯವಿವಾಹವನ್ನು ತಡೆಗಟ್ಟಲು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತಂದ ಸ್ಫೂರ್ತಿ ಯೋಜನೆಯನ್ನು 2022-23ನೇ ಸಾಲಿನಲ್ಲಿ 12.51 ಕೋಟಿ ವೆಚ್ಚದಲ್ಲಿ ಬಾಗಲಕೋಟೆ, ವಿಜಯಪುರ,ಬೆಳಗಾವಿ ಮತ್ತು ಕಲ್ಲುರ್ಗಿ ಜಿಲ್ಲೆಗಳ 11 ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ನಕ ಅನುಮೋದನೆ ನೀಡಲಾಗಿದೆ, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ * 13.20 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ. ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಕೆರೆಹಳ್ಳಿ ಗ್ರಾಮದ ಸ.ನಂ 37ರಲ್ಲಿ 02 ಎಕರೆ ಗೋಮಾಳ ಜಮೀನನ್ನು ಬಡಮಕ್ಕಳ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣ ಉದ್ದೇಶಕ್ಕಾಗಿ ಕ್ಷೇತ್ರೀಯ ಮರಾಠ ಯುವ ವೇದಿಕೆ, ರಿಪ್ಪನ್ ಪೇಟೆಗೆ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.