ಅವಳಿನಗರದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ; 600 ಬಾಣಸಿಗರಿಂದ ಅಡುಗೆ ತಯಾರಿ

ಅವಳಿನಗರದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ; 600 ಬಾಣಸಿಗರಿಂದ ಅಡುಗೆ ತಯಾರಿ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಇಂದು ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಭರ್ಜರಿ ಸಿದ್ದತೆ ನಡೆಯುತ್ತಿದೆ.ಅವಳಿ ನಗರದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಯುವಜನೋತ್ಸವ ಕಾರ್ಯಕ್ರಮ ಹಿನ್ನೆಲೆ ನವ ವಧುವಿನಂತೆ ಗೋಕುಲ ರಸ್ತೆ ಸಿಂಗಾರಗೊಂಡಿದೆ. ನಗರದ ಎತ್ತ ನೋಡಿದ್ರು ಕೆಸರಿಮಯವಾಗಿದೆ. 600 ಬಾಣಸಿಗರಿಂದ ಅಡುಗೆ ತಯಾರಿ ಕಾರ್ಯ ನಡೆಯುತ್ತಿದೆ. ಆಲೂ ಪರೋಟಾ, ಜಾಮೂನು, ಚಿತ್ರನ್ನ, ಆಮ್ಲೆಟ್ ಸೇರಿ ಬಗೆ ಬಗೆಯ ಭಕ್ಷ್ಯಗಳ ಸಿದ್ಧತೆ ಮುಂದುವರೆದಿದೆ.ಹಗಲು ರಾತ್ರಿಯನ್ನದೇ ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಬೆಂಗಳೂರು ಮೂಲದ ಬಾಣಸಿಗರು ಧಾರವಾಡ ಕೃಷಿ ವಿವಿ ಆವರಣದಲ್ಲಿ ಅಡುಗೆ ತಯಾರಿ ಮಾಡುತ್ತಿದ್ದಾರೆ.
ಇತ್ತ, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 2,900 ಪೊಲೀಸರಿಂದ ಭದ್ರತೆ ಇರಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗುತ್ತಿದೆ. 7 ಎಸ್​ಪಿಗಳು, 25 ಡಿವೈಎಸ್​ಪಿ, 60 ಪೊಲೀಸ್ ಇನ್ಸ್​ಪೆಕ್ಟರ್, 18 ಕೆಎಸ್​ಆರ್​ಪಿ ತುಕಡಿ, ನಗರ ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ. ಪ್ರಧಾನಿ ಸಂಚರಿಸುವ ಮಾರ್ಗದುದ್ದಕ್ಕೂ ಸಿಬ್ಬಂದಿ ನಿಯೋಜಿಸಿದ್ದು ರೈಲ್ವೆ ಮೈದಾನದ ಮುಖ್ಯ ವೇದಿಕೆ ಸುತ್ತಮುತ್ತ ಪೊಲೀಸ್ ಭದ್ರತೆ ಇರಲಿದೆ.