ಕೈ ಮುಖಂಡ ಸಲೀಂ ಬಾಯಲ್ಲಿ ಸತ್ಯ ಹೊರಬಂದಿದೆ

ಕಾಂಗ್ರೆಸ್ ಮುಖಂಡ ಸಲಿಂ ಹೇಳಿಕೆ ವಿಚಾರವಾಗಿ ಅವರು ಸತ್ಯವನ್ನೇ ಹೇಳಿದ್ದಾರೆ, ಸತ್ಯವನ್ನು ಮುಚ್ಚಿಡೋಕೆ ಸಾಧ್ಯವಿಲ್ಲ. ಅದನ್ನು ಕಾಂಗ್ರೆಸ್ನವರೇ ಸಾಬೀತುಪಡಿಸಿದ್ದಾರೆ ಎಂದು ಉಸ್ತುವರಿ ಸಚಿವ ಶಂಕರ ಬ. ಪಾಟೀಲ ಮುನೇನಕೊಪ್ಪ ಹೇಳಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇರುವ ಕೆಲವು ನಾಯಕರ ಬಾಯಿಲ್ಲಿ ಸತ್ಯವಾದ ಮಾತುಗಳು ಇವಾಗ್ ಹೊರಗೆ ಬರುತ್ತವೆ. ಅದ್ರಂತೆ ಸಲೀಂ ಅವರು ಈ ಬಗ್ಗೆ ಅವರ ಪಕ್ಷದವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡಿಕೆಶಿ ಕಲೆಕ್ಷನ್ ಗಿರಾಕಿ ಅಂದಿರೋ ವಿಚಾರ, ಈ ಬಗ್ಗೆ ಅವರ ಪಕ್ಷದವರೇ ಮಾತಾಡಿದ್ದಾರೆ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡೋದು ಸೂಕ್ತವಲ್ಲ, ನಾನು ಬೇರೆ ಪಕ್ಷದಿಂದ ಮಂತ್ರಿಯಾದವನು ಹೀಗಾಗಿ ನಾನು ಮಾತನಾಡುವುದು ಸೂಕ್ತವಲ್ಲ. ಅವರ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ, ಏನು ನಡೆದಿದೆ ಅನ್ನೋದನ್ನು ಅವರ ಪಕ್ಷದವರೇ ಹೇಳಿದ್ದಾರೆ, ಜನ ಕೂಡ ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದರು.