ಹೊಸ ವರ್ಷಾಚರಣೆಗೆ ಹೊಸ ಬೇಡಿಕೆಗಳನ್ನಿಟ್ಟ ಬಾರ್, ಪಬ್ ಮಾಲೀಕರು

ಎರಡು ವರ್ಷಗಳ ನಂತರ ಹೊಸವರ್ಷಾಚರಣೆಗೆ ಬೆಂಗಳೂರು ಸಜ್ಜಾಗುತ್ತಿದೆ. ಈ ನಡುವೆ ಗ್ರಾಂಡ್ ಸೆಲೆಬ್ರೇಷನ್ಗೆ ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್ & ಪಬ್ ಮಾಲೀಕರ ಸಂಘದಿಂದ ಡಿಮ್ಯಾಂಡ್ ಮಾಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಸರ್ಕಾರಕ್ಕೆ & ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ, ಮಧ್ಯರಾತ್ರಿ 3 ಗಂಟೆ ತನಕ ಅವಕಾಶ, ಮಹಿಳಾ ಸುರಕ್ಷತೆಗಾಗಿ ಲೇಡಿ ಬೌನ್ಸರ್ಸ್ ನಿಯೋಜನೆ, ಸಪರೇಟ್ ಡ್ಯಾನ್ಸ್ ಫ್ಲೋರ್ ಹೀಗೆ ಕೆಲ ಡಿಮ್ಯಾಂಡ್ ಅನ್ನು ಪಬ್ ಸಂಘ ಮುಂದಿಟ್ಟುಕೊಂಡಿದೆ.