ಹೈದರಾಬಾದ್ ನಲ್ಲಿ ಇಂದು, ನಾಳೆ ಬಿಜೆಪಿ ಬೃಹತ್ ರೋಡ್ ಶೋ
ಹೈದರಾಬಾದ್: ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಾಳೆ ಮತ್ತು ನಾಡಿದ್ದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಈ ಕಾರ್ಯಕಾರಿಣಿ ಸಭೆಗೆ ಪ್ರತಿನಿಧಿಗಳು ಹೈದರಾಬಾದ್‌ಗೆ ಆಗಮಿಸಲಾರಂಭಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಸ್ವಾಗತಿಸಲು ರಾಜ್ಯ ಘಟಕವು ಮೆಗಾ ರೋಡ್‌ಶೋ ಏರ್ಪಡಿಸಲಾಗಿದೆ. ಶಂಶಾಬಾದ್‌ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ವರೆಗೆ ರೋಡ್‌ಶೋಗೆ ಸಿದ್ಧತೆ ನಡೆಸಲಾಗಿದೆ.
ಇಡೀ ಹೈದರಾಬಾದ್ ನಗರವು ಪಕ್ಷದ ಧ್ವಜ ಮತ್ತು ಬ್ಯಾನರ್‌ಗಳೊಂದಿಗೆ ಕೇಸರಿಮಯವಾಗಿದೆ. ಪೋಸ್ಟರ್‌ಗಳು ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸುತ್ತಿದ್ದು, ನಗರದ ಪ್ರತಿ ಮೂಲೆ ಮೂಲೆಯಲ್ಲೂ ಬಿಜೆಪಿಯ ಪ್ರಮುಖ ನಾಯಕರ ದೊಡ್ಡ ಕಟೌಟ್‌ಗಳು ಮತ್ತು ಬ್ಯಾನರ್‌ಗಳು ತುಂಬಿಕೊಂಡಿವೆ.