ಆಕಸ್ಮಿಕ ಅಗ್ನಿ ಅವಘಡ : ಎರಡು ಹೋರಿ ಮತ್ತು ಕರು ಸಾವು

ತುಮಕೂರು : ಆಕಸ್ಮಿಕ ಅಗ್ನಿ ಅವಘಡದಿಂದ ಎರಡು ಹೊರಿ ಮತ್ತು ಎರಡು ಕರುಗಳು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾ ಯಮಾದಾಪುರ ಗ್ರಾಮ ದಲ್ಲಿ ನಡೆದಿದೆ.
ಮತ್ತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಾಪುರ ಗ್ರಾಮ ದಲ್ಲಿ ಪರಮೇಶ ಎಂಬುವರಿಗೆ ಸೇರಿದ ಗೋ ಕೊಠಡಿಗೆ ಅಕಸ್ಮಿಕ ಬೆಂಕಿ ತಗುಲಿದ್ದು ದನದ ಕೊಠಡಿಯೊಳಗಿದ್ದ 2 ಹೋರಿ, 2 ಕರು ಒಂದು ಟಿವಿಎಸ್ ಎಕ್ಸ್ ಎಲ್ ಸುಟ್ಟು ಭಸ್ಮವಾಗಿರು ಘಟನೆ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳ ಅಗಮಿಸುವಷ್ಟರಲ್ಲಿ ಸಂಪೂರ್ಣ ಕೊಠಡಿ ಬೆಂಕಿಗೆ ಆಹುತಿಯಾಗಿದೆ ಸ್ಥಳಕ್ಕೆ ಹಂದನಕೆರೆ ಪೊಲೀಸ್ ಠಾಣಾಧಿಕಾರಿ ಶಿವಪ್ಪ ಮತ್ತು ಸಿಬಂದಿ ಭೇಟಿ ಕೊಟ್ಟು ಪ್ರಕರಣ ದಾಖಲು ಮಾಡಿದ್ದಾರೆ.