ನಾಡಹಬ್ಬಕ್ಕೆ ಖರ್ಚಾಗಿದ್ದು 5,42,07,679 ಕೋಟಿ ರೂ: ಎಸ್.ಟಿ.ಸೋಮಶೇಖರ್
2021 ರ ನಾಡಹಬ್ಬ ದಸರಾ ಖರ್ಚು ವೆಚ್ಚದ ಲೆಕ್ಕವನ್ನು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಡಳಿತ ವತಿಯಿಂದ ಮಂಡಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಲೆಕ್ಕ ಮಂಡಿಸಿದ ಸಚಿವ, ಸರ್ಕಾರದಿಂದ ದಸರಾಗೆ 6 ಕೋಟಿ ಬಿಡುಗಡೆಯಾಗಿತ್ತು. ಈ ಬಾರಿ 5,42,07,679 ಕೋಟಿ ಖರ್ಚಾಗಿದೆ. ಮೈಸೂರು, ಚಾಮರಾಜನಗರ, ಹಾಸನಕ್ಕೆ 1.20 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅರಮನೆ ಗೌರವ ಸಂಭಾವನೆ 40 ಲಕ್ಷ ರೂ. ಉಳಿದಂತೆ ವಿದ್ಯುತ್, ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮ, ಸ್ತಬ್ಧ ಚಿತ್ರ, ಆನೆಗಳ ನಿರ್ವಹಣೆ ಸೇರಿದಂತೆ ದಸರೆಗೆ 4,22,07,679 ಕೋಟಿ ರೂ ಖರ್ಚು ಆಗಿದೆ ಎಂದು ವಿವರಿಸಿದರು.