ಕೊರೊನಾ ನಿಯಮ ಮೀರಿ ಓಣಂ ಆಚರಣೆ | ECR Group of Institutions | College | Udupi |

ಕಾಲೇಜು ವಿದ್ಯಾರ್ಥಿಗಳು ಕೊರೋನಾ ನಿಯಮಾವಳಿಗಳನ್ನು ಮೀರಿ ಓಣಂ ಆಚರಿಸಿ, ಮೋಜು ಮಸ್ತಿ ನಡೆಸಿದ ಹಿನ್ನೆಲೆಯಲ್ಲಿ ತಹಸೀಲ್ದಾರರ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದು ಎರಡು ವರ್ಷದ ಹಳೆದ ವಿಡಿಯೋ ಎಂದು ತಹಶೀಲ್ದಾರರಿಗೆ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಓಣಂ ಸಂಭ್ರಮದ ಹಿನ್ನಲೆಯಲ್ಲಿ ಊಟದ ವ್ಯವಸ್ಥೆ ಮಾತ್ರ ಮಾಡಿದ್ದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೆ ಪ್ರಾರಂಭವಾಗಿದ್ದ ಇಸಿಆರ್ ಕಾಲೇಜು ಓಣಂ ಮೋಜು ಮಸ್ತಿಯ ವಿಡಿಯೋವನ್ನು ಹಳೆಯ ವಿಡಿಯೋ ಎಂದು ನಂಬಿಸಲು ಹೊರಟಿದೆ ಎನ್ನಲಾಗಿದೆ. ಕಾಲೇಜು ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.