ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು: ಸಂವಿಧಾನದ ಬಗ್ಗೆ ಸಂಘ ಪರಿವಾರದವರಿಗೆ ಒಪ್ಪಿಗೆ ಇಲ್ಲ. ಇವರು ಜಾತಿ ವ್ಯವಸ್ಥೆ, ಚತುರ್ವರ್ಣ ಹಾಗೂ ಮನು ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಿ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಶೋಷಣೆ‌ ಇರುತ್ತದೆ. ಇದು ಮುಂದುವರಿಯಬೇಕೆಂದು ಸಂಘ ಪರಿವಾರದವರು ಬಯಸುತ್ತಾರೆ. ಇದರಿಂದ ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಇವರ ನಿಲುವಿಗೆ ವಿರುದ್ಧವಾಗಿ ಸಂವಿಧಾನ ಇರುವ ಹಿನ್ನೆಲೆ ವಿರೋಧಿಸುತ್ತಿದ್ದಾರೆ ಎಂದರು.