ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದೊಳಗಿನ ಹೆದ್ದಾರಿ ಯೋಜನೆ ಮುಂದೂಡಿದ ವನ್ಯಜೀವಿ ಮಂಡಳಿ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್ಪಿ) ಒಳಗೆ 6.3 ಕಿಲೋಮೀಟರ್ ಸ್ಯಾಟಲೈಟ್ ಟೌನ್ಶಿಪ್ ವರ್ತುಲ ರಸ್ತೆ (ಎಸ್ಟಿಆರ್‌ಆರ್) ಅನ್ನು ರಾಜ್ಯ ವನ್ಯಜೀವಿ ಮಂಡಳಿ ಗುರುವಾರ ಸ್ಥಗಿತಗೊಳಿಸಿದೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎಸ್ಟಿಆರ್‌ಆರ್ ಮೂಲಕ ಅಂತರರಾಜ್ಯ ವಾಹನಗಳಿಗೆ ಬೈಪಾಸ್ ಒದಗಿಸಲು ಯೋಜಿಸಿದೆ. ಈ ಯೋಜನೆಯನ್ನು ಬೆಂಗಳೂರಿನೊಳಗಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮಾರ್ಗವಾಗಿ ನೋಡಲಾಗುತ್ತದೆ.
ಬಿಎನ್ಪಿ ವ್ಯಾಪ್ತಿಯಲ್ಲಿನ ಪ್ರದೇಶದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ವನ್ಯಜೀವಿಗಳಿಗೆ ಶಬ್ದ ಮಾಲಿನ್ಯದಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಧ್ವನಿ ನಿರೋಧಕದೊಂದಿಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಎನ್‌ಎಚ್‌ಎಐ ಪ್ರಸ್ತಾಪಿಸಿತ್ತು.
ಆದರೆ ಮಂಡಳಿಯ ಸಭೆಯಲ್ಲಿ, ಬನ್ನೇರುಘಟ್ಟದಲ್ಲಿ ಹೆದ್ದಾರಿಗೆ ಅನುಮತಿ ನೀಡುವುದರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂತಹ ಸ್ಥಳಗಳಲ್ಲಿ ರಾಜ್ಯ ಸರ್ಕಾರದ ನಿಲುವನ್ನು ಸಂಕೀರ್ಣಗೊಳಿಸುತ್ತದೆ ಎಂದು ಸದಸ್ಯರೊಬ್ಬರು ಗಮನಸೆಳೆದರು