ಪೊಲೀಸರು ವಾಹನಗಳಿಗೆ ಬದಲು ರಸ್ತೆ ಗುಂಡಿಗಳಿಗೆ ಕ್ಯಾಮೆರಾ ಹಿಡಿದರೆ ಒಂದಷ್ಟು ಜೀವಗಳನ್ನು ಉಳಿಸಬಹುದು: ಡಿಕೆಶಿ

ಪೊಲೀಸರು ವಾಹನಗಳಿಗೆ ಬದಲು ರಸ್ತೆ ಗುಂಡಿಗಳಿಗೆ ಕ್ಯಾಮೆರಾ ಹಿಡಿದರೆ ಒಂದಷ್ಟು ಜೀವಗಳನ್ನು ಉಳಿಸಬಹುದು: ಡಿಕೆಶಿ

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯೋರ್ವರು ಮೃತಪಟ್ಟಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಟ್ವೀಟ್ ಮಾಡಿರುವ ಅವರು, ದಂಡ ವಸೂಲಿ ಮಾಡುವ ಬದಲು ರಸ್ತೆ ಗುಂಡಿಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಬೆಂಗಳೂರು ನಗರದ ಪೊಲೀಸರಿಗೆ ಸಲಹೆ ನೀಡಿದ್ದಾರೆ.

''ಬೆಂಗಳೂರು ಪೊಲೀಸರು ದಂಡ ವಸೂಲಿಗೆ ವಾಹನಗಳಿಗೆ ಕ್ಯಾಮೆರಾ ಹಿಡಿಯುವ ಬದಲು ವಾಹನಗಳು ಸಾಗುವ ರಸ್ತೆ ಗುಂಡಿಗಳಿಗೆ ಕ್ಯಾಮೆರಾ ಹಿಡಿದರೆ ಒಂದಷ್ಟು ಜೀವಗಳನ್ನು ಉಳಿಸಬಹುದು. ದಂಡ ವಸೂಲಿಗಿಳಿಯುವ ಸರಕಾರ ಜನರ ಜೀವ ದಂಡ ಆಗುವುದನ್ನು ತಪ್ಪಿಸುವ ಜವಾಬ್ದಾರಿ ತೋರಬೇಕು'' ಎಂದು ಡಿ.ಕೆ ಶಿವಕುಮಾರ್ ಟ್ವೀಟ್ ಮೂಲಕ ಪೊಲೀಸರಿಗೆ ಸಲಹೆಗಳನ್ನು ನೀಡಿದ್ದಾರೆ.