ಬೆಳಗಾವಿಯಲ್ಲಿ ಜನಸಂಕಲ್ಪಸಮಾವೇಶಕ್ಕೆ ಕೌಂಟ್‌ಡೌನ್‌: ಅಮಿತ್ ಶಾ ಆಗಮನ ವೇಳೆ ಪುಣೆ- ಬೆಂಗಳೂರು ಹೆದ್ದಾರಿ ಕಂಪ್ಲೀಟ್‌ ಬಂದ್‌

ಬೆಳಗಾವಿಯಲ್ಲಿ ಜನಸಂಕಲ್ಪಸಮಾವೇಶಕ್ಕೆ ಕೌಂಟ್‌ಡೌನ್‌: ಅಮಿತ್ ಶಾ ಆಗಮನ ವೇಳೆ ಪುಣೆ- ಬೆಂಗಳೂರು ಹೆದ್ದಾರಿ ಕಂಪ್ಲೀಟ್‌ ಬಂದ್‌

ಧಾರವಾಡ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಧಾರವಾಡ, ಬೆಳಗಾವಿ ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಇಂದು ಬೆಳಗಾವಿಯಲ್ಲಿ ಜನ ಸಂಕಲ್ಪ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.

ಬೆಳಗಾವಿಯಲ್ಲಿ ಜನ ಸಂಕಲ್ಪ ಸಮಾವೇಶಕ್ಕೆ ಅಮಿತ್ ಶಾ ಆಗಮನ ವೇಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲಾಗಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಂಪ್ಲೀಟ್‌ ಬಂದ್‌ ಮಾಡಲಾಗಿದೆ. ಮಧ್ಯಾಹ್ನ 3.45ರಿಂದ ಸಂಜೆ 4.15ವರೆಗೂಸಂಪೂರ್ಣ ಕ್ಲೂಸ್‌ಮಾಡಲಾಗಿದೆ. ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಸೂಚನೆ ನೀಡಲಾಗಿದೆ.

ಇಷ್ಟೇ ಅಲ್ಲದೇ ಜನಸಂಕಲ್ಪಸಮಾವೇಶಕ್ಕೆ ಆಗಮಿಸಿದ ಜನರಿಗೆ ಭರ್ಜರಿಯಾಗಿ ಊಟ ತಯಾರಾಗುತ್ತಿದ್ದ, ಪಲಾವ್‌, ಶೀರಾ, ರೈತಾ ವ್ಯವಸ್ಥೆ ಮಾಡಲಾಗಿದೆ. ಸುಮಾರು 70ರಿಂದ 80 ಸಾವಿರ ಜನರಿಗೆ ಊಟ ವ್ಯವಸ್ಯೆ ಮಾಡಲಾಗಿದ್ದು, 80 ಕೌಂಟರ್‌ಗಳಲ್ಲಿ ತೆರೆಯಲಾಗಿದೆ. 80 ಕ್ವಿಂಟಲ್‌ ಅಕ್ಕಿಯಿಂದ ಪಲಾವ್‌, 40 ಕ್ವಿಂಟಲ್‌ ರವೆಯಿಂದ ಶೀರಾ ತಯಾರು ಮಾಡಲಾಗುತ್ತಿದೆ.