ಹಸುಗಳನ್ನು ಮೈದಾನದಲ್ಲಿ ಬಿಟ್ಟಿದ್ದಕ್ಕೆ ದಲಿತ ಮಹಿಳೆ ಮೇಲೆ ಚಪ್ಪಲಿಯಿಂದ ಹಲ್ಲೆ!
ಹಸುಗಳನ್ನು ಮೈದಾನದಲ್ಲಿ ಬಿಟ್ಟಿದ್ದಿಯಾ ಅಂತ ಮೇಲ್ಜಾತಿಯ ವ್ಯಕ್ತಿಯೊಬ್ಬ ದಲಿತ ಮಹಿಳೆಗೆ ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಶೋಭಮ್ಮ ಹರಿಜನ್ ಎಂಬ ಮಹಿಳೆಗೆ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರು ಎಸ್ಸಿ/ಎಸ್ಟಿ ಮೇಲೆ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಮರೀಶ್ ಕಂಬಾರ್ ಎಂಬಾತನನ್ನು ಬಂಧಿಸಿದ್ದಾರೆ.
ಹಸುಗಳನ್ನು ಬೀದಿಗೆ ಬಿಟ್ಟಿದ್ದಿಯಾ ಅಂತ ಶೋಭಮ್ಮಾ ಮೇಲೆ ಅಮರೀಶ್ ಕಂಬಾರ್ ಹಲ್ಲೆ ನಡೆಸಿದ್ದು, ಆಕೆ ಬೇಡಿಕೊಳ್ಳುತ್ತಿದ್ದರೂ ಬಿಡದೇ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ಕಂಬಾರ್ ಅವರಿಗೆ ಸೇರಿದ ಮೈದಾನಲ್ಲಿ ತಮ್ಮ ಹಸುಗಳು ಇರುವುದನ್ನು ನೋಡಿದ ಕೂಡಲೇ ಶೋಭಮ್ಮಾ ಹಸುಗಳನ್ನು ಕರೆದೊಯ್ಯಲು ಹೋಗಿದ್ದಾರೆ. ಆದರೆ ಆಕೆಯನ್ನು ಮೈದಾನದಿಂದ ಹೊರಗೆ ಹೋಗಲು ಬಿಡದ ಅಮರೀಶ್ ಕಂಬಾರ್ ಹಲ್ಲೆ ನಡೆಸಿದ್ದಾನೆ.
ಶೋಭಮ್ಮಾಳನ್ನು ಮರಕ್ಕೆ ಕಟ್ಟಿ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪವನ್ನು ಕೊಪ್ಪಳ ಜಿಲ್ಲಾ ಪೊಲೀಸರು ನಿರಾಕರಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.