ಬೆಳಗಾವಿಯಲ್ಲಿ ರೈತರ ಮೇಲೆ ಪೊಲೀಸರ ದಬ್ಬಾಳಿಕೆ. ಪ್ರತಿಭಟಿನೆ ಮಾಡುತ್ತಿದ್ದ ಮಹಿಳೆಯರನ್ನು ಎಳೆದಾಡಿದ ಪೊಲೀಸರು.!

ಬೆಳಗಾವಿಯಲ್ಲಿ ರೈತರ ಮೇಲೆ ಪೊಲೀಸರ ದಬ್ಬಾಳಿಕೆ. ಪ್ರತಿಭಟಿನೆ ಮಾಡುತ್ತಿದ್ದ ಮಹಿಳೆಯರನ್ನು ಎಳೆದಾಡಿದ ಪೊಲೀಸರು.!

ಬೆಳಗಾವಿ: ಬೆಳಗಾವಿಯಲ್ಲಿ ರೈತರ ಮೇಲೆ ಪೊಲೀಸರ ದಬ್ಬಾಳಿಕೆ ನಡೆಸಿದ್ದು, ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರನ್ನು ಎಳೆದಾಡಿದ್ದಾರೆ. ಸೀರೆ ಹರಿದು ದಬ್ಬಾಳಿಕೆ ಮಾಡಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತ ಪಡಿಸಿ ರೈತರು ಪ್ರತಿಭಟನೆ ಮಾಡಿದ್ದಾರೆ.

ಜೀವ ಕೊಟ್ಟೇವು ಜಮೀನು ಕೊಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ, ಈ ಹಿನ್ನೆಲೆ ಏಕಾಏಕಿ ನೂರಾರು ಪೊಲೀಸರನ್ನು ಕರೆತಂದು ಕಾಮಗಾರಿ ಆರಂಭ ಮಾಡಲಾಗಿದೆ. ಹೀಗಾಗಿ ಕೈಯಲ್ಲಿ ಕುಡಗೋಲು ಹಿಡಿದು ರೈತರಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯರನ್ನ ಎಳೆದಾಡಿ ಸೀರೆ ಹರಿದು ಹಾಕಿದ್ದಾರೆ. ಇನ್ನೂ ರೈತ ಮಹಿಳೆಯರು ನಮಗೆ ಗುಂಡು ಹಾಕಿ ಸಾರ್ ಅಂತ ಕಣ್ಣೀರು ಹಾಕಿದ್ದಾರೆ. ಪೊಲೀಸ್ ವಾಹನ ತಡೆದ ಮಹಿಳೆಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.