ನಮ್ಮ ಕೆಆರ್​​​ಪಿಪಿ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ: ಜನಾರ್ದನ ರೆಡ್ಡಿ

ನಮ್ಮ ಕೆಆರ್​​​ಪಿಪಿ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ: ಜನಾರ್ದನ ರೆಡ್ಡಿ

ಕೊಪ್ಪಳ: ಗಾಲಿ ಜನಾರ್ದನ ರೆಡ್ಡಿ ರಾಜಕೀಯದಿಂದ ದೂರ ಸರಿದಿದ್ದರು. ಆದರೆ ಇದೀಗ ವಿಧಾನಸಭೆ ಚುನಾವಣೆಗೆ ಹೊಸ ಪಕ್ಷದ ಮೂಲಕ ಮತ್ತೆ ಎಂಟ್ರಿಕೊಟ್ಟಿದ್ದಾರೆ.

ನಮ್ಮ ಕೆಆರ್​​​ಪಿಪಿ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ ಎಂದು ಹೇಳಿದ್ದಾರೆ.ಜಿಲ್ಲೆಯ ಗಂಗಾವತಿಯಲ್ಲಿ ಮಾತನಾಡಿದ ಅವರು, ಗಂಗಾವತಿ ಭಾಗದಲ್ಲಿ ಸಾವಿರಾರು ಜನರು ನಮ್ಮ ಪಕ್ಷ ಸೇರಿದ್ದಾರೆ.

ಬಿಜೆಪಿ, ಕಾಂಗ್ರೆಸ್​​ ಕಾರ್ಯಕರ್ತರು ಕೆಆರ್​​​ಪಿಪಿ ಸೇರಿದ್ದಾರೆ. ನಾನು ಯಾರನ್ನೂ ಸೋಲಿಸುವುದಕ್ಕಾಗಿ ಅಭ್ಯರ್ಥಿ ಹಾಕುವುದಿಲ್ಲ. ನಮ್ಮ ಪಕ್ಷ ಗೆಲ್ಲುವ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು. ಈಗಾಗಲೇ ಆಕಾಂಕ್ಷಿ ಅಭ್ಯರ್ಥಿಗಳ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ಬೆಂಗಳೂರು ಭಾಗದಲ್ಲೂ ಪಕ್ಷ ಸಂಘಟನೆ ಆರಂಭಗೊಂಡಿದೆ. ದೊಡ್ಡ ದೊಡ್ಡ ಕುಟುಂಬಗಳು ಕೆಆರ್​​​ಪಿಪಿಯನ್ನು ಬೆಂಬಲಿಸಿವೆ. ಕಲ್ಯಾಣ ಕರ್ನಾಟಕ, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದರು.