ಕಳೆದ 24 ಗಂಟೆಗಳಯಲ್ಲಿ 7,974 ಮಂದಿಗೆ ಕೊರೋನಾ, 343 ಸಾವು

ಕಳೆದ 24 ಗಂಟೆಗಳಯಲ್ಲಿ 7,974 ಮಂದಿಗೆ ಕೊರೋನಾ, 343 ಸಾವು

ನವದೆಹಲಿ,ಡಿ.16-ಭಾರತದಲ್ಲಿ ಹೊಸದಾಗಿ 7,974 ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಪ್ರಕರಣಗಳ ಸಂಕ್ಯೆ 3,47,18,602ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 87,245ಕ್ಕೆ ತಗ್ಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ತಾಜಾ ಮಾಹಿತಿ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‍ಗೆ 343 ಮಂದಿ ಬಲಿಯಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 4,76,478ಕ್ಕೆ ತಲುಪಿದೆ ಎಂದು ಸಚಿವಾಲಯ ಹೇಳಿದೆ. ಪ್ರಕರಣಗಳ ದೈನಿಕ ಏರಿಕೆ ಸಂಖ್ಯೆ ಕಳೆದ 49 ದಿನಗಳಲ್ಲಿ 15,000ಕ್ಕಿಂತ ಕಡಿಮೆ ದಾಖಲಾಗಿದೆ.

ಸಕ್ರಿಯ ಪ್ರಕರಣಗಳು ಒಟ್ಟಾರೆ ಸೋಂಕುಗಳ ಶೇ.0.25ರಷ್ಟಿದ್ದು 2020ರ ಮಾರ್ಚ್‍ನಿಂದ ಅತಿ ಕಡಿಮೆ ಪ್ರಮಾಣವಾಗಿದೆ. ರಾಷ್ಟ್ರದಲ್ಲಿ ಕೋವಿಡ್‍ನಿಂದ ಚೇತರಿಕೆ ಪ್ರಮಾಣ ಶೇ.98.38ರಷ್ಟು ದಾಖಲಾಗಿದ್ದು, 2020ರ ಮಾರ್ಚ್‍ನಿಂದೀಚೆಗಿನ ಅತ್ಯಕ ಪ್ರಮಾಣವಾಗಿದೆ ಎಂದು ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ಇತ್ತೀಚಿನ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 317ರಷ್ಟು ಕಡಿಮೆ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.