ಈಜಲು ಹೋಗಿದ್ದ ಟೆಕ್ಕಿಗಳ ಸಾವು
ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆಯಲ್ಲಿ ಈ ದುರ್ಘಟನೆ ನಡೆದಿದ್ದು ಹೈದ್ರಾಬಾದ್ ಮೂಲದ ಮಧುಕಿರಣ ಮತ್ತು ರಾಜೇಶ ಕುಮಾರ ದುರ್ಘಟನೆಯಲ್ಲಿ ಮೃತ ದುರ್ದೈವಿಗಳಾಗಿದ್ದಾರೆ.ಹೈದ್ರಾಬಾದ ನ ಐಟಿ ಉದ್ಯೋಗಿಗಳಾದ ನಾಲ್ವರು ಯುವಕರು ಪ್ರವಾಸಕ್ಕೆಂದು ಆನೆಗೊಂದಿಗೆ ಆಗಮಿಸಿದ್ರು. ಸಮೀಪದ. ಸಂಗಾಪುರದ ರೆಸಾರ್ಟನಲ್ಲಿ ತಂಗಿದ್ರು.,ಇಂದು ಮೋಜಿಗೆಂದು ಸಾಣಾಪುರದ ಕೆರೆಯಲ್ಲಿ ನಾಲ್ವರು ದುಮುಕಿದ್ರು. ಆದರೆ, ಈಜಲಾಗದೇ ನಾಲ್ವರಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮದಳದಿಂದ ರಾಜೇಶ್ ಎಂಬಾತನ ಶವ ಪತ್ತೆಯಾಗಿದ್ದು ಇನ್ನೂ ಮಧು ಕಿರಣ್ ಶವಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.ನರಸಿಂಹ ಮತ್ತು ಅಲೋಕ ಕುಮಾರ ಈ ವೇಳೆ ಬದುಕುಳಿದಿದ್ದಾರೆ.