ಬೆತ್ತಲಾಗಿ ಲೈವ್ ಬಂದು ಜನರಿಗೆ ಸವಾಲು ಹಾಕಿದ ಬ್ಲೂ ಫಿಲ್ಮ್ ದಂಧೆ ಆರೋಪಿ ಗೆಹನಾ

ಬೆತ್ತಲಾಗಿ ಲೈವ್ ಬಂದು ಜನರಿಗೆ ಸವಾಲು ಹಾಕಿದ ಬ್ಲೂ ಫಿಲ್ಮ್ ದಂಧೆ ಆರೋಪಿ ಗೆಹನಾ

ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ರಾಜ್ ಕುಂದ್ರಾ ಕೇಸ್ ದಿನೇ-ದಿನೇ ಹೊಸ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅನೇಕ ನಟಿಯರ ಹೆಸರು ಕೇಳಿಬರುತ್ತಿದೆ. ಈಗಾಗಲೇ ಶರ್ಲಿನ್ ಚೋಪ್ರಾ ಮತ್ತು ಗೆಹನಾ ವಸಿಷ್ಠ್ ಹೆಸರು ಜೋರಾಗಿ ಚರ್ಚೆಯಾಗುತ್ತಿದೆ.

ಮುಂಬೈ ಪೊಲೀಸರೇ ಹೇಳಿರುವಂತೆ ಫೆಬ್ರವರಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವಾಗಿದೆ. ಫೆಬ್ರವರಿಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ನಟಿ, ನಿರ್ದೇಶಕಿ ಗೆಹನಾ ವಸಿಷ್ಠ್ ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಗೆಹನಾ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.

ಇತ್ತೀಚಿಗೆ ವಿಡಿಯೋ ಮೂಲಕ ಗೆಹನಾ, ಪ್ರಕರಣದ ಬಗ್ಗೆ ಹಾಗೂ ರಾಜ್ ಕುಂದ್ರಾಗೂ ಅವರಿಗೂ ಇರುವ ಸಂಬಂಧ. ಅಶ್ಲೀಲ ವಿಡಿಯೋ ಪ್ರಕರಣ, ತಾವು ರಾಜ್ ಕುಂದ್ರಾ ಸಂಸ್ಥೆಗಾಗಿ ಮಾಡಿ ಕೊಡುತ್ತಿದ್ದ ವಿಡಿಯೋ ಎಲ್ಲದರ ಬಗ್ಗೆಯೂ ವಿವರವಾಗಿ ಮಾತನಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಜ ಕುಂದ್ರ ಪರ ಮಾತನಾಡಿದ್ದ ಗೆಹನಾ, ಎರೋಟಿಕಾ ಮತ್ತು ಪೋರ್ನ್ ವಿಡಿಯೋ ನಡುವೆ ವ್ಯತ್ಯಾಸವಿದೆ, ಎರಡನ್ನು ಒಂದೇ ಎಂದು ಹಳಬೇಡಿ ಅಂತ ವಾದಮಾಡಿದ್ದರು.

ಇದೀಗ ಗೆಹನಾ ಬೆತ್ತಲಾಗಿ ಲೈವ್ ಬರುವ ಮೂಲಕ ಸವಾಲ್ ಹಾಕಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಬೆತ್ತಲಾಗಿರುವ ಗೆಹನಾ, ಅಶ್ಲೀಲವಾಗಿ ಕಾಣಿಸುತ್ತಿದ್ದೀನಾ? ಎಂದು ನೋಡುಗರಿಗೆ ಪ್ರಶ್ನೆ ಮಾಡಿದ್ದಾರೆ. ಶುಭಾಶಯ ಕೋರುತ್ತಾ ಲೈವ್ ವಿಡಿಯೋ ಪ್ರಾರಂಭ ಮಾಡಿದ ಗೆಹನಾ ಮೊದಲು ಅಶ್ಲೀಲವಾಗಿ ಕಾಣುತ್ತಿದ್ದೀನಾ ಎಂದಿದ್ದಾರೆ. ಇದನ್ನು ಪೋರ್ನ್ ಎಂದು ನೀವು ಕರೆಯುತ್ತೀರಾ ಪ್ರಶ್ನೆ ಮಾಡಿದ್ದಾರೆ. ತಾನು ಏನನ್ನು ಧರಿಸಿಲ್ಲ ಬೆತ್ತಲಾಗಿ ಲೈವ್ ಬಂದಿರುವುದಾಗಿ ಒತ್ತಿ ಹೇಳಿರುವ ಗೆಹನಾ ಈ ವಿಡಿಯೋ ಬಗ್ಗೆ ಏನು ಹೇಳುತ್ತೀರಿ ಎಂದು ನೋಡುಗರಲ್ಲಿ ಕೇಳಿದ್ದಾರೆ.

"ನಾನು ಬೆತ್ತಲಾಗಿ ಲೈವ್ ಬಂದರೂ ಜನರು ಇದನ್ನು ಅಶ್ಲೀಲ ಎಂದು ಪರಿಗಣಿಸುತ್ತಿಲ್ಲ. ನಾನು ಬಟ್ಟೆ ಧರಿಸಿದರೂ ಕೂಡ ಅವುಗಳನ್ನು ಅಶ್ಲೀಲ ಸಿನಿಮಾ ಎಂದು ಹೇಳಲಾಗಿದೆ. ಎಲ್ಲರೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಜನರಲ್ಲಿರುವ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತಿದೆ" ಎಂದು ಗೆಹನಾ ಬೆತ್ತಲೆ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ.

ರಾಜ್ ಕುಂದ್ರ ಬೆಂಬಲಕ್ಕೆ ನಿಂತ ಕಾರಣ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಗೆಹನಾ ಆರೋಪ ಮಾಡಿದ್ದಾರೆ. ಗೆಹನಾ ಮಾತಿಗೆ ಅನೇಕರು ಪ್ರತಿಕ್ರಿಯೆ ನೀಡಿ ಬೆತ್ತಲಾಗುವುದು ಅಂದರೆ ಪೋರ್ನ್ ಆಗುತ್ತಾ? ಎಂದು ಕೇಳುತ್ತಿದ್ದಾರೆ.

ರಾಜ್ ಕುಂದ್ರ ಜೊತೆ ಕೆಲಸ ಮಾಡಿದ ಬಗ್ಗೆ ಬಹಿರಂಗ ಪಡಿಸಿದ್ದ ಗೆಹನಾ, ಕಳೆದ ವರ್ಷದ ಅಕ್ಟೋಬರ್ ವೇಳೆಗೆ ನನಗೆ ರಾಜ್‌ಕುಂದ್ರಾ ಮ್ಯಾನೇಜರ್‌ನಿಂದ ಕರೆ ಬಂತು. ನಿಮ್ಮ ವೈಯಕ್ತಿಕ ಆಪ್‌ ಮಾಡಿಕೊಡುತ್ತೇವೆ. ಈಗಾಗಲೇ ಶೆರ್ಲಿನ್, ಪೂನಂ ಪಾಂಡೆಗೆ ಮಾಡಿಕೊಟ್ಟಿದ್ದೇವೆ. ನೀವು ಒಂದು ಆಪ್‌ ಮಾಡಿಕೊಳ್ಳಿ. ನಿಮಗೆ ಒಪ್ಪಿಗೆಯಾಗುವ ಕಂಟೆಂಟ್ ಅನ್ನೇ ನೀವು ಹಾಕಿರಿ. ಬಂದ ಹಣವನ್ನು ಹಂಚಿಕೊಳ್ಳೋಣ ಎಂದರು. ರಾಜ್ ಅನ್ನು ಸಹ ನಾನು ಭೇಟಿಯಾದೆ, ಅವರು ಸಹ ನಿಮಗೆ ಸರಿ ಎನಿಸುವ ವಿಡಿಯೋಗಳನ್ನಷ್ಟೆ ಹಾಕಿರಿ, ಗ್ಲಾಮರಸ್ ಆಗಿಯೇ ಇರಬೇಕೆಂಬ ಒತ್ತಡ ಇಲ್ಲ ಎಂದಿದ್ದರು'' ಎಂದಿದ್ದರು ಗೆಹನಾ.

''ನಾನು ಜನವರಿ ವರೆಗೆ ಆಪ್‌ ನಡೆಸಿದೆ ನಂತರ ಅದನ್ನು ಬಂದ್ ಮಾಡಿದೆ. ಆ ನಂತರ ಮತ್ತೆ ಅವರು ನನ್ನನ್ನು ಸಂಪರ್ಕಿಸಿ 'ಹಾಟ್‌ಶಾಟ್ಸ್' ಆಪ್‌ಗಾಗಿ ಸಿನಿಮಾ ಒಂದನ್ನು ಮಾಡಿಕೊಡಲು ಕೇಳಿದರು. ಅಂತೆಯೇ ನಾನು ಒಪ್ಪಿಕೊಂಡು ಸಿನಿಮಾ ಮಾಡುತ್ತಿದ್ದೆ. ನಟ-ನಟಿಯರ ವಿಷಯವನ್ನು ನಮ್ಮ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರು. ಶೂಟ್ ಸಹ ಚೆನ್ನಾಗಿಯೇ ನಡೆಯುತ್ತಿತ್ತು'' ಎಂದು ವಿಷಯ ತೆರೆದಿಟ್ಟಿದ್ದರು.

''ಆದರೆ ಫೆಬ್ರವರಿಯಲ್ಲಿ ಏಕಾ-ಏಕಿ ನಮ್ಮ ಸೆಟ್‌ ಮೇಲೆ ಪೊಲೀಸರು ದಾಳಿ ನಡೆಸಿ ಕೆಲವರನ್ನು ಬಂಧಿಸಿದರು. ಆಗ ನಾನು ಸೆಟ್‌ನಲ್ಲಿ ಇರಲಿಲ್ಲ. ನಂತರ ನನ್ನ ಮನೆಗೂ ಬಂದು ವಾರೆಂಟ್ ಇಲ್ಲದೆ ಮನೆಯನ್ನೆಲ್ಲ ಹುಡುಕಿ ಮೊಬೈಲ್, ಲ್ಯಾಪ್‌ಟಾಪ್ ಎಲ್ಲವನ್ನೂ ಹೊತ್ತೊಯ್ದರು. ಒಂದು ದಿನ ಪೂರ್ತಿ ನನ್ನ ಮನೆಯಲ್ಲೇ ಪೊಲೀಸರು ಇದ್ದರು. ನನ್ನನ್ನು ಎರಡು ದಿನ ವಿಚಾರಣೆ ನಡೆಸಿ, ರಾಜ್ ಕುಂದ್ರಾ ಬಗ್ಗೆ ಪ್ರಶ್ನೆ ಕೇಳಿದರು. ರಾಜ್ ಕುಂದ್ರಾ ವಿರುದ್ಧ ಹೇಳಿಕೆ ನೀಡುವಂತೆ ಸಹ ಹೇಳಿದರು. ಆದರೆ ನಾನು ಒಪ್ಪಲಿಲ್ಲ'' ಎಂದಿದ್ದರು ಗೆಹನಾ.

''ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಪೊಲೀಸರಿಗೆ ಸಿಗಲಿಲ್ಲ. ಅಲ್ಲದೆ ಅವರು ಹೇಳಿದಂತೆ ನಾನು ರಾಜ್ ಕುಂದ್ರಾ ವಿರುದ್ಧ ಯಾವುದೇ ಹೇಳಿಕೆ ನೀಡಲಿಲ್ಲ ಹಾಗಾಗಿ ನನ್ನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಈ ತಂತ್ರ ಅವರು ಬಳಸಿದರು. ಮೊದಲ ಬಾರಿಗೆ ಪೊಲೀಸರು ನನಗೆ ನೊಟೀಸ್ ಕಳಿಸಿದಾಗಲೂ ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಲಿಲ್ಲ. ಈಗಲೂ ಅಷ್ಟೆ, ನಾನು ತಪ್ಪು ಮಾಡಿಲ್ಲ ಹಾಗಾಗಿ ನಾನು ಧೈರ್ಯವಾಗಿದ್ದೇನೆ. ಇದನ್ನೆಲ್ಲ ನಿಮ್ಮ ಮುಂದೆ ಧೈರ್ಯದಿಂದ ಹೇಳಿಕೊಳ್ಳುತ್ತಿದ್ದೇನೆ'' ಎಂದಿದ್ದರು.

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಜುಲೈ 19 ರಂದು ಬಂಧಿಸಿದ್ದಾರೆ. ಭಾರತದಲ್ಲಿ ಅಶ್ಲೀಲ ವಿಡಿಯೋಗಳ ನಿರ್ಮಾಣ ಮಾಡುತ್ತಿದ್ದ ರಾಜ್ ಕುಂದ್ರಾ ಆ ವಿಡಿಯೋಗಳನ್ನು ಲಂಡನ್‌ನ ತಮ್ಮ ಸಂಬಂಧಿಯ ಕಂಪೆನಿಯೊಟ್ಟಿಗೆ ಸೇರಿಕೊಂಡು ಅಲ್ಲಿಂದ ಹಾಟ್‌ಶಾಟ್ಸ್ ಎಂಬ ಆಪ್‌ಗೆ ಅಪ್‌ಲೋಡ್ ಮಾಡಿಸಿ ದಿನವೊಂಕ್ಕೆ ಲಕ್ಷಾಂತರ ಹಣ ಗಳಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸದ್ಯ ಕುಂದ್ರ ನ್ಯಾಯಾಂಗ ಬಧನದಲ್ಲಿದ್ದಾರೆ.

Source Film Beat