ಆಸ್ಕರ್ ಪ್ರಶಸ್ತಿಯ ಶಾರ್ಟ್ಲಿಸ್ಟ್ನಲ್ಲಿ ಸ್ಥಾನ ಪಡೆದ ಭಾರತದ ಚಿತ್ರಗಳು ಯಾವುವು

ಈವರೆಗೂ ಭಾರತದ ಯಾವ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ಬಾರಿ ಹೊಸ ಭರವಸೆ ಮೂಡಿದೆ. ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವ ‘ಚೆಲ್ಲೋ ಶೋ’ ಸಿನಿಮಾ ಈಗ ಒಂದು ಹಂತ ಮೇಲೇರಿದೆ. ಅಕಾಡೆಮಿ ಅವಾರ್ಡ್ಸ್ ಸಮಿತಿಯು ಬುಧವಾರ ಶಾರ್ಟ್ಲಿಸ್ಟ್ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ‘ಚೆಲ್ಲೋ ಶೋ’ ಸ್ಥಾನ ಪಡೆದಿದೆ. ಜೊತೆಗೆ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಕೂಡ ‘ಅತ್ಯುತ್ತಮ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಶಾರ್ಟ್ಲಿಸ್ಟ್ ಆಗಿದೆ.