ಎರಡನೇ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು ಪ್ರಾರಂಭ

ಬೆಂಗಳೂರು ವಿಭಾಗದ ಎರಡನೇ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು ಪ್ರಾರಂಭವಾಗಿದೆ. ಯಶವಂತಪುರ ರೈಲು ನಿಲ್ದಾಣದಿಂದ ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸನಾಹ್ವಾಲ್‌ಗೆ ಮೊದಲ ಸೇವೆ ಪ್ರಾರಂಭವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಶವಂತಪುರ - ಸನಹ್ವಾಲ್-ಯಶವಂತಪುರ ರೌಂಡ್ ಟ್ರಿಪ್ ಆಧಾರದ ಮೇಲೆ ಪಿಸಿಇಟಿ ನಿರ್ವಹಿಸುವ ಗುತ್ತಿಗೆಯನ್ನು ಇನ್‌ಲ್ಯಾಂಡ್ ವರ್ಲ್ಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ 6 ವರ್ಷಗಳ ಅವಧಿಗೆ ನೀಡಲಾಗಿದೆ.