ಗೋಹತ್ಯೆ ಆರೋಪಿಗಳಿಗೆ 2-7 ವರ್ಷ ಜೈಲು ಶಿಕ್ಷೆ: ಸಚಿವ ಚೌಹಾಣ್

ಬೆಂಗಳೂರು: ಗೋಹತ್ಯೆ ಆರೋಪಿಗಳಿಗೆ 2-7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಇಂದು ವಿಕಾಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಗೋವುಗಳ ಹತ್ಯೆ ಸಂಖ್ಯೆ ಇಳಿಕೆಯಾಗುತ್ತಿದೆ. ಕಾನೂನು ಉಲ್ಲಂಘಿಸಿ ಗೋಹತ್ಯೆ ಎಸಗುವ ಆರೋಪಿಗಳಿಗೆ 50 ಸಾವಿರ ರೂ.ನಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.