ಹಿಂದೂಗಳು 'ಮುಸ್ಲಿಂ ಸೂತ್ರ' ಅಳವಡಿಸಿಕೊಳ್ಳಬೇಕು; ಎಐಯುಡಿಎಫ್ ಮುಖ್ಯಸ್ಥನ ವಿವಾದಾತ್ಮಕ ಹೇಳಿಕೆ

ಹಿಂದೂಗಳು 'ಮುಸ್ಲಿಂ ಸೂತ್ರ' ಅಳವಡಿಸಿಕೊಳ್ಳಬೇಕು; ಎಐಯುಡಿಎಫ್ ಮುಖ್ಯಸ್ಥನ ವಿವಾದಾತ್ಮಕ ಹೇಳಿಕೆ

ಗುವಾಹಟಿ: ಹಿಂದೂಗಳು 'ಮುಸ್ಲಿಂ ಸೂತ್ರ'ವನ್ನು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಶುಕ್ರವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು (ಹಿಂದೂಗಳು) ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಗಂಡು ಮಕ್ಕಳಿಗೆ 20-22ನೇ ವಯಸ್ಸಿನಲ್ಲಿ ಹಾಗೂ ಹೆಣ್ಣುಮಕ್ಕಳಿಗೆ 18-20ರ ವಯಸ್ಸಿನಲ್ಲಿ ಮದುವೆ ಮಾಡಬೇಕು ಎಂದಿದ್ದಾರೆ.