ಇಂಗ್ಲೆ0ಡ್ ಪ್ರವಾಸದ ಬಳಿಕ ಮತ್ತೆ ಶೂಟಿಂಗ್ಗೆ ಅನುಷ್ಕಾ ಶರ್ಮಾ

ಮುಂಬೈ

ಪತಿ ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಟೂರ್ನಮೆಂಟ್ಗಾಗಿ ಮಗಳು ವಮಿಕಾ ಜೊತೆ ಇಂಗ್ಲೆ0ಡ್ ಪ್ರವಾಸ ಕೈಗೊಂಡಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೂರು ತಿಂಗಳ ಬಳಿಕ ಭಾರತಕ್ಕೆ ಮರಳಿದ್ದಾರೆ. ಮುಂಬೈಗೆ ಬರುತ್ತಿದ್ದಂತೆ ನಟಿ ತಮ್ಮ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆAಡ್ ಪ್ರವಾಸದ ವೇಳೆ ಕೂಡ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗ್ಗಿಂದಾಗೆ ಪತಿ ಮತ್ತು ಮಗಳು ಸೇರಿದಂತೆ ಅನೇಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದರು. ಇನ್ನು ಇಂಗ್ಲೆ0ಡ್ ಪ್ರವಾಸದ ವೇಳೆ ನಟಿ ಅನುಷ್ಕಾ ನಟಿ ಸೋನಂ ಕಪೂರ್ ಸಲಹೆಯಂತೆ ಹೊಸ ಹೇರ್ಸ್ಟೈಲ್ ಮಾಡಿಸಿದ್ದ ವಿಚಾರವನ್ನು ಖುದ್ದು ಅನುಷ್ಕಾ ತಿಳಿಸಿದ್ದು, ಈ ಮೂಲಕ ಬಾಣಂತಿ ಕೂದಲ ಸಮಸ್ಯೆಗೆ ಪರಿಹಾರ ಕಂಡುಕೊ0ಡೆ ಎಂದಿದ್ದರು. ಬಿಳಿ ಬಣ್ಣದ ಟಿಶರ್ಟ್ ಡಂಗ್ರಿ ಡ್ರೆಸ್ನಲ್ಲಿ ನಟಿ ಅನುಷ್ಕಾ ಕಂಡಿದ್ದು, ಎಲ್ಲರ ಮನಸೊರೆಗೊಂಡಿದ್ದಾರೆ. ತಾಯ್ತನದ ಹಿನ್ನಲೆ ಅವರು ಚಿತ್ರಗಳಿಂದ ಬ್ರೇಕ್ ಪಡೆದಿದ್ದರು.