ರಾಜ್ಯದಲ್ಲಿ ತರಕಾರಿ, ಹಣ್ಣು ಬೆಲೆ ಗಗನಕ್ಕೆ; ಎಷ್ಟಿದೆ ದರದ ಮಾಹಿತಿ..!

ರಾಜ್ಯದಲ್ಲಿ ತರಕಾರಿ, ಹಣ್ಣು ಬೆಲೆ ಗಗನಕ್ಕೆ; ಎಷ್ಟಿದೆ ದರದ ಮಾಹಿತಿ..!

ಬೆಂಗಳೂರು: ಇನ್ನೇನು ಬೇಸಿಗೆ ಆರಂಭವಾಗಿದೆ. ಈಗಾಗಲೇ ವಿಪರೀತ ಬಿಸಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದಾರೆ. ಈ ನಡುವೇ ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ.

ಕಳೆದ ವಾರದಿಂದ ಬೆಂಡೆಕಾಯಿ, ಟೊಮೆಟೋ, ಕ್ಯಾರೆಟ್ ಸೇರಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ.

ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ಕೊರತೆಯಾಗಿದ್ದರಿಂದ ದಿಢೀರ್‌ ಬೆಲೆ ಏರಿಕೆಯಾಗಿದೆ.ಒಂದು ಕೆಜಿ ಟೊಮೆಟೋ ಬೆಲೆ 30 ರಿಂದ 40 ರೂಪಾಯಿ, ಒಂದು ಕೆಜಿ ಬಿನ್ಸ್ ಬೆಲೆ 40ರಿಂದ 70 ರೂಪಾಯಿ, ಒಂದು ಕೆಜಿ ಕ್ಯಾರೆಟ್ ಬೆಲೆ 20ರಿಂದ 50 ರೂಪಾಯಿ ಆಗಿದೆ.

ಹಾಗೆಯೇ ಹಣ್ಣುಗಳಾದ ಒಂದು ಕೆಜಿ ಸೇಬು ಹಣ್ಣಿನ ಬೆಲೆ 170 ರಿಂದ 200 ರೂ, ಒಂದು ಕೆಜಿ ಬ್ಲ್ಯಾಕ್ ದ್ರಾಕ್ಷಿ 150 ರಿಂದ 220 ರೂ., ಒಂದು ಕೆಜಿ ದಾಳಿಂಬೆ 120 ರಿಂದ 190 ರೂ.ವರೆಗೆ ಏರಿಕೆಯಾಗಿದೆ.ಬೇಸಿಗೆ ಆರಂಭವಾಗುತ್ತಿದ್ದಂತೆ ತರಕಾರಿ ಹಾಗೂ ಹಣ್ಣುಗಳ ಬೆಲೆ ಗಗನನಕ್ಕೇರಿದೆ. ಬೆಲೆ ಏಪ್ರಿಲ್-ಮೇ ವೇಳೆಗೆ ತರಕಾರಿ, ಹಣ್ಣುಗಳ ಬೆಲೆ ಹೆಚ್ಚಾಗೋ ನಿರೀಕ್ಷೆ ಇದೆ.