ಬೆಳಗಾವಿಯಲ್ಲಿ `ಗಿಫ್ಟ್ ಪಾಲಿಟಿಕ್ಸ್' ; ಮಾಜಿ ಶಾಸಕ ಸಂಜಯ್ ಪಾಟೀಲ್ ಜನ್ಮದಿನಾಚರಣೆಗೆ ಬಂದ ಮಹಿಳೆಯರಿಗೆ ಭರ್ಜರಿ ಉಡುಗೊರೆ!

ಬೆಳಗಾವಿ : ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ಮತದಾರರ ಸೆಳೆಯಲು ಮೂರು ಪಕ್ಷಗಳು ನಾನ ಕಸರತ್ತು ನಡೆಸುತ್ತಿದ್ದಾರೆ.
ಇದೀಗ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರ ಜನ್ಮದಿನ. ಈ ಪ್ರಯುಕ್ತ ಮಹಿಳೆಯರಿಗೆ ತಟ್ಟೆ, ಲೋಟ, ಬಟ್ಟಲು ಉಡುಗರೆಯಾಗಿ ನೀಡಿದ್ದಾರೆ.ಜನ್ಮ ದಿನಾಚರಣೆಗೆ ಆಗಮಿಸಿದ ಮಹಿಳೆಯರಿಗೆ ತಟ್ಟೆ, ಲೋಟ, ಬಟ್ಟಲು ಗಿಫ್ಟ್ ನೀಡಿದ್ದು, ಇದನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮುಗಿಬಿದ್ದರು. ಬೆಳಗಾವಿಯ ಗೋಮಟೇಶ್ ವಿದ್ಯಾಪೀಠ ಆವರಣದಲ್ಲಿ ನಿನ್ನೆ ರಾತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಮಹಾಂತೇಶ ದೊಡ್ಡಗೌಡರ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು