ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೋಧ್‌ಪುರ ಮತ್ತು ವಿಶಾಖಪಟ್ಟಣಂಗೆ ಬೇಡಿಕೆಯಮೇರೆಗೆ ಏಕಮುಖ ವಿಶೇಷ ರೈಲು ಸಂಚಾರ ಆರಂಭ

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೋಧ್‌ಪುರ ಮತ್ತು ವಿಶಾಖಪಟ್ಟಣಂಗೆ ಬೇಡಿಕೆಯಮೇರೆಗೆ ಏಕಮುಖ ವಿಶೇಷ ರೈಲು ಸಂಚಾರ ಆರಂಭ

ಬೆಂಗಳೂರು: ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯಿಂದ ಜೋಧ್‌ಪುರ ಮತ್ತು ವಿಶಾಖಪಟ್ಟಣಂಗೆ ಬೇಡಿಕೆಯಮೇರೆಗೆ ಏಕಮುಖ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ

ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ನೈಋತ್ಯ ರೈಲ್ವೆಯು ಜೋಧ್‌ಪುರ ಮತ್ತು ವಿಶಾಖಪಟ್ಟಣಕ್ಕೆ ಈ ಕೆಳಗಿನ ಏಕಮುಖ ರೈಲುಗಳನ್ನು ಬೇಡಿಕೆಯ ಮೇರೆ

ರೈಲು ಸಂಖ್ಯೆ. 06589 ಕೆಎಸ್‌ಆರ್ ಬೆಂಗಳೂರು - ಜೋಧ್‌ಪುರ ಏಕಮುಖ ಟಿಓಡಿ ವಿಶೇಷ ಎಕ್ಸ್‌ಪ್ರೆಸ್ 12.10.2022ಬೆಳಿಗ್ಗೆ 11:30 ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು 14.10.2022ಬೆಳಿಗ್ಗೆ 04:15 ಗಂಟೆಗೆ ಜೋಧ್‌ಪುರವನ್ನು ತಲುಪುತ್ತದೆ.

ರೈಲು ಬೆಂಗಳೂರು ಕಂಟೋನ್ಮೆಂಟ್, ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ವಾಡಿ, ಕಲಬುರಗಿ, ಸೋಲಾಪುರ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ವಾಪಿ, ಸೂರತ್, ವಡೋದರಾ, ಆನಂದ್, ಅಹಮದಾಬಾದ್, ಮೆಹಸಾನಾ, ಭಿಲ್ಡಿ, ರಾಣಿವಾರ, ಮಾರ್ವಾರ್ ಭಿನ್ಮಾಲ್, ಜಲೋರ್, ಸಮ್ದಾರಿ ಮತ್ತು ಭಗತ್-ಕಿ-ಕ ಠಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ರೈಲು 1-ಎಸಿ ಟು ಟೈರ್ ಕೋಚ್, 12-ಎಸಿ-ತ್ರೀ ಟೈರ್ ಕೋಚ್‌ಗಳು ಮತ್ತು 2-ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.

ಗೆ ನಿರ್ವಹಿಸುತ್ತದೆ ಎಂದಿದೆ.

ರೈಲು ಸಂಖ್ಯೆ. 06587 ಬೆಂಗಳೂರು ಕಂಟೋನ್ಮೆಂಟ್ - ವಿಶಾಖಪಟ್ಟಣಂ ಏಕಮುಖ ಟಿಓಡಿ ವಿಶೇಷ ಎಕ್ಸ್‌ಪ್ರೆಸ್ 15.10.2022 ರಂದು ಬೆಳಿಗ್ಗೆ 03:50 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು ಮರುದಿನ ಬೆಳಿಗ್ಗೆ 11:00 ಗಂಟೆಗೆ ವಿಶಾಖಪಟ್ಟಣಂ ತಲುಪುತ್ತದೆ.

ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟ್ಟೈ, ಕಟಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಓಂಗೋಲ್‌, ವಿಜಯವಾಡ, ಏಲೂರು, ರಾಜಮಂಡ್ರಿ, ಸಮಲ್‌ಕೋಟ್‌ ಮತ್ತು ದುವ್ವಾಡ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಈ ರೈಲು 1 - ಎಸಿ ಟು ಟೈರ್ ಕೋಚ್, 15 - ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳು ಮತ್ತು 2- ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು/ದಿವ್ಯಾಂಗಜನ ಸ್ನೇಹಿ ಕಂಪೋರ್‌ಮೆಂಟ್‌ನ ಸಂಯೋಜನೆಯನ್ನು ಹೊಂದಿರುತ್ತದೆ ಎಂದು ಹೇಳಿದೆ.