ಆತಂಕ ಮೂಡಿಸುತ್ತಿದೆ ಒಮಿಕ್ರಾನ್ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 ವೈರಸ್‌ನ ರೂಪಾಂತರವಾದ ಒಮಿಕ್ರಾನ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಪತ್ತೆಯಾಗಿದ್ದು, ಅದು ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ ವಿಜ್ಞಾನಿ ಡಾ.
ಅಭಿವೃದ್ಧಿಶೀಲ ರಾಷ್ಟ್ರಗಳ ಲಸಿಕೆ ತಯಾರಕರ ನೆಟ್‌ವರ್ಕ್ (ಡಿಸಿವಿಎಂಎನ್) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಈ ಹೊಸ ರೂಪಾಂತರಗಳು ಪ್ರಾಯೋಗಿಕವಾಗಿ ಹೆಚ್ಚು ತೀವ್ರವಾಗಿವೆ ಎಂದು ಸೂಚಿಸಲು ಯಾವುದೇ ದೇಶದಿಂದ ಯಾವುದೇ ಅಂಕಿಅಂಶ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
"ಒಮಿಕ್ರಾನ್‌ನ 300 ಕ್ಕೂ ಹೆಚ್ಚು ಉಪವಿಭಾಗಗಳಿವೆ. ಇದೀಗ ಸಂಬಂಧಿಸಿರುವುದು ಎಕ್ಸ್‌ಬಿಬಿ ಎಂದಿದ್ದಾರೆ. ಇದರ ನಡುವೆಯೇ, ರಾಜ್ಯದಲ್ಲಿ ಹೊಸ ರೂಪಾಂತರಿ ಎಕ್ಸ್‌ಬಿಬಿ ಕೇರಳದಲ್ಲೂ ಈಗಾಗಲೇ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ನ ಇತರ ಉಪತಳಿಗಳಾದ ಬಿಎ.2.3.20 ಹಾಗೂ ಬಿಕ್ಯು.1 ರೂಪಾಂತರಿಗಳೂ ಪತ್ತೆಯಾಗಿದ್ದು ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಉಪತಳಿಗಳ ಪ್ರಕರಣಗಳು ಪತ್ತೆಯಾಗಿವೆ. ಎಕ್ಸ್‌ಬಿಬಿ ಓಮಿಕ್ರಾನ್ ನ ಎರಡು ಉಪತಳಿಗಳಾದ ಬಿಜೆ-1 ಹಾಗೂ ಬಿಎ.2.75 ನ ಮರುಸಂಯೋಜಿತ ವಂಶಾವಳಿಯಾಗಿದ್ದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ.