ಸಿಬ್ಬಂದಿಗೆ ಮಾನಸಿಕ ಕಿರುಕುಳ ಹಿನ್ನೆಲೆ: DCP ನಿಶಾ ಜೇಮ್ಸ್ ಎತ್ತಂಗಡಿ

ಸಿಬ್ಬಂದಿಗೆ ಮಾನಸಿಕ ಕಿರುಕುಳ ಹಿನ್ನೆಲೆ: DCP ನಿಶಾ ಜೇಮ್ಸ್ ಎತ್ತಂಗಡಿ

ಬೆಂಗಳೂರು: ಸಿಬ್ಬಂಧಿಗಳಿಗೆ ಕಿರುಕುಳ ಆರೋಪದ ಹಿನ್ನೆಲೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಕಚೇರಿ ಸಿಬ್ಬಂದಿಗಳು ಕಿರುಕುಳ ಆರೋಪ ಮಾಡಿ ದೂರು ನೀಡಿದ್ದರು.

ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ನಿಶಾ ಜೇಮ್ಸ್ ಅವರನ್ನು ವರ್ಗಾವಣೆ ಮಾಡಿ ಕ್ರಮ ಕೈಗೊಂಡಿದೆ.

ಬೆಂಗಳೂರು ಪೊಲೀಸ್ ಆಡಳಿತ ವಿಭಾಗಕ್ಕೆ ಬಿ.ಎಂ.ಲಕ್ಷ್ಮಿ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದ್ದು, ನಿಶಾ ಅವರನ್ನು ಐಎಸ್ ಡಿಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಸೆಪ್ಟೆಂಬರ್​ 3ರಂದು ADGP ಸಲೀಂರಿಗೆ ಸಿಬ್ಬಂದಿ ದೂರು ನೀಡಿದ್ದರು. ನಮಗೆ ಮಾನಸಿಕ ಕಿರುಕುಳ ನೀಡಿ ನಮ್ಮ ಭವಿಷ್ಯದಲ್ಲಿ ಚೆಲ್ಲಾಟ ಮಾಡುತ್ತಾರೆ. ಪೊಲೀಸ್​ ಸಿಬ್ಬಂದಿ ದೂರಿನಲ್ಲಿ ಆರೋಪ ಮಾಡಿದ್ದರು. ಸುಮಾರು 26 SDA, FDA ಸಿಬ್ಬಂದಿ ಲಿಖಿತ ದೂರಿಗೆ ಸಹಿ ಮಾಡಿದ್ದರು. ಅದರನ್ವಯ ಇದೀಗ ನಿಶಾ ಜೇಮ್ಸ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.