ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹೆಚ್.ಟಿ. ಬಳಿಗಾರ್

ಕಾರಿಪುರ: ಬಿ.ಎಸ್.ಯಡಿಯೂರಪ್ಪ ಅವರ ಭದ್ರಕೋಟೆ ಶಿಕಾರಿಪುರದಲ್ಲಿ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ. ಬಳಿಗಾರ್ ಬಿಜೆಪಿಗೆ ಸೇರಿದ್ದಾರೆ. ಜೆಡಿಎಸ್‌ನಿಂದ ಕಳೆದ 2 ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಅಭ್ಯರ್ಥಿ ಹೆಚ್.ಟಿ.ಬಳಿಗಾರ್, ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದು, ಹಲವು ಮುಖಂಡರು & ನೂರಾರು ಕಾರ್ಯಕರ್ತರೊಂದಿಗೆ ಬಳಿಗಾರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.