ಮಕ್ಕಳೊಂದಿಗೆ ಗಣೇಶ ಹಬ್ಬ ಆಚರಿಸಿದ ನಟಿ ಶಿಲ್ಪಾ ಶೆಟ್ಟಿ
1.
ಮುಂಬೈ: ಪತಿ ರಾಜ್ ಕುಂದ್ರಾ ಅವರ ಗೈರು ಹಾಜರಿಯಲ್ಲಿ ಮಕ್ಕಳೊಂದಿಗೆ ನಟಿ ಶಿಲ್ಪಾ ಶೆಟ್ಟಿ ಗಣೇಶ ಹಬ್ಬವನ್ನು ಉತ್ಸಾಹದಿಂದಲೇ ಆಚರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಇರಿಸಲಾಗಿರುವ ಗಣೇಶ ಮೂರ್ತಿಯ ಮುಂದೆ ಕುಳಿತು ಮಗ ಮತ್ತು ಮಗಳಿಗೆ ಸಿಹಿ ತಿನಿಸುತ್ತಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.
ತಮ್ಮ ಉಡುಪುಗಳನ್ನೇ ಹೋಲುವ ಉಡುಪನ್ನು ಮಗಳಿಗೂ ತೊಡಿಸಿರುವ ಶಿಲ್ಪಾ ಶೆಟ್ಟಿ ನಗುತ್ತಲೇ ಮಕ್ಕಳಿಗೆ ಸಿಹಿ ತಿನಿಸುತ್ತಿದ್ದಾರೆ.