ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ 'ವಿಕ್ರಾಂತ್ ರೋಣ' ಟೀಂ, ಹೊಸ ಸಾಂಗ್​ ರಿಲೀಸ್​ ಡೇಟ್​ ಅನೌನ್ಸ್

ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ 'ವಿಕ್ರಾಂತ್ ರೋಣ' ಟೀಂ, ಹೊಸ ಸಾಂಗ್​ ರಿಲೀಸ್​ ಡೇಟ್​ ಅನೌನ್ಸ್
ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ (Vikrant Rona)​ ಸಿನಿಮಾದ ಟ್ರೈಲರ್ (Trailer)​ ಈಗಾಗಲೇ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಲ್ಲದೇ ಬೆಂಗಳುರಿನಲ್ಲಿ ನಡೆದ ಟ್ರೈಲರ್​​ ಲಾಂಚ್ (Trailer Launch) ಕಾರ್ಯಕ್ರಮvಊ ಸಹ ಅದ್ಧೂರಿಯಾಗಿ ನಡೆದಿತ್ತು.
ಸ್ಯಾಂಡಲ್​ವುಡ್​ನ ಸ್ಟಾರ್ ನಟರುಗಳು ಎಲ್ಲರೂ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ 3ಡಿ ಅಲ್ಲಿ ವಿಕ್ರಾಂತ್ ರೋಣನನ್ನು ಕಣ್ತುಂಬಿಕೊಂಡರು. ಗಣ್ಯರು ಮತ್ತು ಮಾಧ್ಯಮದವರಿಗೆ (Media) ಈ ಪ್ರೀ ಟ್ರೈಲರ್ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಟ್ರೈಲರ್ ನೋಡಿದ ಎಲ್ಲರೂ ಒಮ್ಮೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಚಿತ್ರವನ್ನು ಹಾಡಿಹೊಗಳಿದ್ದರು. ಇನ್ನು, ಈಗಾಗಲೇ ಬಿಡುಗಡೆ ಆಗಿರುವ ರಾ..ರಾ.. ರಕ್ಕಮ್ಮಾ ಹಾಡು ಸಖತ್ ಹಿಟ್ ಆಗಿದೆ. ಇದೀಗ ಅದೇ ರಿತಿಯಲ್ಲಿ ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಹೊಸ ಹಾಡಿನ ರಿಲೀಸ್​ಗೆ ಡೇಟ್​ ಫಿಕ್ಸ್: ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಜಾಕ್ಲಿನ್ ಸೊಂಟ ಬಳುಕಿಸಿರುವ ರಾ..ರಾ...ರಕ್ಕಮ್ಮಾ ಹಾಡು ಸೂಪರ್ ಡೂಪ್ ಹಿಟ್ ಆಗಿದೆ. ನಂತರ ಬಿಡುಗಡೆ ಆದ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಚಿತ್ರತಂಡ ಸಿನಿಂಆದ ಮತ್ತೊಂದು ಹೊಸ ಹಾಡನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಚಿತ್ರದ 'Lullaby Song - Rajkumari' ಲಿರೀಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಲ್ಲದೇ ಈ ಕುರಿತು ಟ್ವೀಟರ್​ ಪೋಸ್ಟ್ ಸಹ ಹಂಚಿಕೊಂಡಿದೆ.
ನಾಳೆ ಬಿಡುಗಡೆ ಆಗಲಿದೆ ಮತ್ತೊಂದು ಸಾಂಗ್:

ಹೌದು, ವಿಕ್ರಾಂತ್ ರೋಣ ಚಿತ್ರದ 'Lullaby Song - Rajkumari' ಲಿರೀಕಲ್ ವಿಡಿಯೋ ಸಾಂಗ್ ಕನ್ನಡದಲ್ಲಿ ನಾಳೆ ಅಂದರೆ ಜುಲೈ 2ರಂದು ಸಂಜೆ 5:02ಕ್ಕೆ ಬಿಡುಗಡೆ ಆಗಲಿದೆ. ಆದರೆ ಉಳಿದ ಭಾಷೆಗಳಲ್ಲಿ ಬೇರೆ ಬೇರೆ ದಿನದಲ್ಲಿ ರಿಲಿಸ್ ಆಗಲಿದೆ. ಅದರಂತೆ ಮಲೆಯಾಳಂನಲ್ಲಿ ಜುಲೈ 3ಕ್ಕೆ ಸಂಜೆ 5:02ಕ್ಕೆ, ತೆಲುಗಿನಲ್ಲಿ ಜುಲೈ 4ಕ್ಕೆ ಸಂಜೆ 5:02ಕ್ಕೆ, ಹಿಂದಿಯಲ್ಲಿ ಜುಲೈ 5ಕ್ಕೆ ಸಂಜೆ 5:02ಕ್ಕೆ ಮತ್ತು ತಮಿಳಿನಲ್ಲಿ ಜುಲೈ 6ಕ್ಕೆ ಸಂಜೆ 5:02ಕ್ಕೆ ಈ ಲರೀಕಲ್ ವಿಡಿಯೋ ಸಾಂಗ್ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೇ ಸುದೀಪ್ ಸಹ ವಿಕ್ರಾಂತ್ ರೋಣ ಆಲ್ಬಮ್​ ನಲ್ಲಿ ಈ ಹಾಡು ನನ್ನ ಫೇವರೇಟ್ ಎಂದು ಟ್ವೀಟ್ ಮಾಡಿದ್ದು, ಸಾಂಗ್​ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.