ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್: ವಿಕ್ರಾಂತ್ ರೋಣ ಬಿಡುಗಡೆಗೆ ಡೇಟ್ ಫಿಕ್ಸ್.

The World Gets A New Hero On Feb 24, 2022 #VikrantRonaOnFeb24 @anupsbhandari @JackManjunath @Asli_Jacqueline @nirupbhandari @AJANEESHB @neethaofficial @shaliniartss @Alankar_Pandian @Kichchacreatiin @ZeeStudios_ @TSeries @LahariMusic @VikrantRona #VikrantRona pic.twitter.com/V2hER6qFeb
— Kichcha Sudeepa (@KicchaSudeep) December 7, 2021
ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಫೆಬ್ರವರಿ 24ರಂದು ತೆರೆಗೆ ಅಪ್ಪಳಿಸಲಿದೆ.ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಹಾಗೂ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವು ಅಂದು ಇಡೀ ವಿಶ್ವದಾದ್ಯಂತ ತೆರೆ ಕಾಣಲಿದೆ.
ಅಲ್ಲದೇ, ಚಿತ್ರ ತಂಡವು ಟೀಸರ್ ನ್ನು ಕೂಡ ಬಿಡುಗಡೆ ಮಾಡಿದೆ. ಈ ಟೀಸರ್ ನಲ್ಲಿ ಕಿಚ್ಚ ಬೈಕ್ ಮೇಲೆ ಕುಳಿತುಕೊಂಡಿದ್ದಾರೆ. ಫೆ. 24ರಂದು ಈ ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ ಎಂಬ ಶೀರ್ಷಿಕೆಯನ್ನು ಕೂಡ ಇದಕ್ಕೆ ಕೊಡಲಾಗಿದೆ. ಇದನ್ನು ಕಂಡ ಅಭಿಮಾನಿಗಳು ಸಖತ್ ಖುಷಿ ಪಡುತ್ತಿದ್ದಾರೆ. ಹೀಗಾಗಿಯೇ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಗರಿಗೆದರುತ್ತಿವೆ.
ವಿಕ್ರಾಂತ್ ರೋಣ ಚಿತ್ರವು 3 ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ಕಾಡಿನ ಸೆಟ್ ಹಾಕಲಾಗಿದ್ದು. ಹೀಗಾಗಿಯೇ ಈ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ನಟ ನಿರೂಪ್ ಭಂಡಾರಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.