ಉಪ ಚುನಾವಣೆ: ಮೊಕಾಮಾ ಕ್ಷೇತ್ರವನ್ನು ಉಳಿಸಿಕೊಂಡ ಆರ್‌ಜೆಡಿ

ಹೊಸದಿಲ್ಲಿ: ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಬಿಹಾರದಲ್ಲಿ ನಡೆದ ಉಪ ಚುನಾವಣೆಯಲ್ಲಿ ತನ್ನ ಒಂದು ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಇನ್ನೊಂದು ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಗೆಲುವು ಸಾಧಿಸಿದೆ.
ಮೊಕಾಮಾ ಕ್ಷೇತ್ರವನ್ನು 16,000ಕ್ಕೂ ಅಧಿಕ ಮತಗಳಿಂದ ಗೆದ್ದುಕೊಂಡಿರುವ ಆರ್‌ಜೆಡಿ ತನ್ನ ಸ್ಥಾನ ಉಳಿಸಿಕೊಂಡರೆ, ಗೋಪಾಲ್‌ಗಂಜ್ ವಿಧಾನಸಭೆಯಲ್ಲಿ ಬಿಜೆಪಿ ಜಯ ಸಾಧಿಸಿದೆ.
ಗೋಪಾಲ್‌ಗಂಜ್‌ನಲ್ಲಿ ಬಿಜೆಪಿ ನಾಯಕಿ ಕುಸುಮ್ ದೇವಿ ಅವರು ಆರ್‌ಜೆಡಿಯ ಮೋಹನ್ ಗುಪ್ತಾ ವಿರುದ್ಧ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುಭಾಶ್ ಸಿಂಗ್ ಅವರ ಪತ್ನಿಯಾಗಿದ್ದು, ಸುಭಾಶ್ ಅವರ ನಿಧನದಿಂದ ಉಪಚುನಾವಣೆ ಅನಿವಾರ್ಯವಾಗಿತ್ತು