ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿಲ್ಲ: ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ

ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿಲ್ಲ: ಸ್ಪಷ್ಟನೆ ನೀಡಿದ ರಿಷಬ್ ಶೆಟ್ಟಿ

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಟ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ & ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ವೈರಲ್ ಸುದ್ದಿಯ ಕುರಿತು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. 'ಇಂತಹ ಸುಳ್ಳುಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಹೊಂಬಾಳೆ ಫಿಲ್ಮ್ಸ್ ನವರು ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಿದ್ದರೆ ಅವರೇ ಹೇಳುತ್ತಾರೆ. ಆದರೆ, ನಾನು ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿಲ್ಲ ಎಂದಿದ್ದಾರೆ.