ಬಿಟ್ ಕಾಯಿನ್ ಬಗ್ಗೆ ಜನರಿಗೆ ಕಲ್ಪನೆಯೇ ಇಲ್ಲ, ಶಾಸಕ ಬೆಲ್ಲದ

ಬಿಟ್‌ ಕಾಯಿನ್ ಬಗ್ಗೆ ಜನರಿಗೆ ಕಲ್ಪನೆಯೇ ಇಲ್ಲ. ಸಾಕಷ್ಟು ಜನ ರಾಜಕಾರಣಿಗಳಿಗೂ ಕಲ್ಪನೆ ಇಲ್ಲ. ಮಾಧ್ಯಮದಲ್ಲಿಯೂ ಆ ಬಗ್ಗೆ ಮಾಹಿತಿ ಇದ್ದವರು ಕಡಿಮೆ ಇದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಎಂದರೆ ಬೇರೆ ಬೇರೆ ದೇಶಗಳ ಕರೆನ್ಸಿ ಇದ್ದಂತೆ ಎಲ್ಲ ಕರೆನ್ಸಿಗಳ ದರ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಇದೇ ರೀತಿ ಕೆಲ ಟೆಕ್ಕಿಗಳು ಖಾಸಗಿ ಕರೆನ್ಸಿ ತಂದಿದ್ದಾರೆ. ಆ ರೀತಿಯ ಕರೆನ್ಸಿಗೆ ಕ್ರಿಪ್ಟೋ ಕರೆನ್ಸಿ ಅಂತಾರೆ. ಅದು ಕೇವಲ ಆನ್‌ಲೈನ್‌ದಲ್ಲಿ ಇರುತ್ತವೆ. ಇದು ಯಾರ ಕಡೆಯೂ ಭೌತಿಕವಾಗಿ ಇರೋದಿಲ್ಲ. ಕೇವಲ ಕಾಂಗ್ರೆಸ್‌ನವರು ಉಹಾಪೋಹದಲ್ಲಿ ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. ಬಿಟ್‌ ಕಾಯಿನ್‌ ಪ್ರಕರಣ ಸಂಬಂಧ ದಾಖಲೆ ಇದ್ದರೆ ಇಡಿಗೆ ಕೊಡಲಿ ಅಂತಾ ಕಾಂಗ್ರೆಸ್‌ನವರಲ್ಲಿ ವಿನಂತಿ ಮಾಡಿಕೊಳ್ಳುವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ಅದರ ಬಗ್ಗೆ ಕಾಂಗ್ರೆಸ್‌ನವರು ವಿಚಾರ ಮಾಡಬೇಕು. ದೇಶದಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅದರ ಬಗ್ಗೆ ವಿಚಾರ ಮಾಡುವ ಅವಶ್ಯಕತೆ ಇದೆ. ಸರಿಯಾದ ರಾಜಕೀಯ ಸಲಹೆ ಕೊಡದೇ ಸಿದ್ದರಾಮಯ್ಯ ವಿನಾಕರಣ ಸಮಯ ಹಾಳು ಮಾಡುತ್ತಿದ್ದಾರೆ. ಪ್ರಿಯಾಂಕ್‌ ಖರ್ಗೆ ಇದರ ಬಗ್ಗೆ ಓದಿಕೊಂಡಿದ್ದಾರೆ. ಅವರ ಬಗ್ಗೆ ಏನು ಸಂಶಯ ಇಲ್ಲ. ಆದರೆ ಅವರ ಬಳಿ ದಾಖಲೆ ಇದ್ದರೆ ಕೊಡಲಿ ಎಂದು ಆಗ್ರಹಿಸಿದ್ದರು ಎಂದು ಶಾಸಕ ಬೆಲ್ಲದ ಹರಿಹಾಯ್ದರು.