ತಂದೆಗೆ ಕೆಲಸ ಸಿಕ್ಕಿತೆಂದು ಮಗಳು ನೀಡಿದ ಪ್ರತಿಕ್ರಿಯೆ ನೋಡಿದ್ರೆ ಕಣ್ಣೀರು ಬರುತ್ತೆ

ತಂದೆ ಮತ್ತು ಮಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಮುದ್ದಾದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದು. ಇತ್ತೀಚಿಗೆ ಇಂತಹದೊಂದು ವಿಡಿಯೋ ಜನಮನ ಸೆಳೆಯುತ್ತಿದೆ. ತಂದೆ ಮತ್ತು ಮಗಳ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ. ಹೆಣ್ಣುಮಕ್ಕಳು ತಮ್ಮ ಭಾವನೆಗಳನ್ನು ತಮ್ಮ ತಂದೆಯ ಜೊತೆ ಉತ್ತಮವಾಗಿ ವ್ಯಕ್ತಪಡಿಸುತ್ತಾರೆ ಮತ್ತು ಈ ವೀಡಿಯೊ ಅದನ್ನು ಸಾಬೀತುಪಡಿಸುತ್ತದೆ.ದಲ್ಲಿ ಪುಟ್ಟ ಬಾಲಕಿಯೊಬ್ಬಳು ಶಾಲಾ ಡ್ರೆಸ್‌ನಲ್ಲಿ ಕಣ್ಣುಗಳ ಮೇಲೆ ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಅಲ್ಲಿಯೇ ಅವಳ ಮುಂದೆ ತಂದೆ ಕೈಯಲ್ಲಿ ಸ್ವಿಗ್ಗಿ ಟಿ-ಶರ್ಟ್ ಹಿಡಿದು ನಿಂತಿದ್ದಾರೆ. ಅಸಲಿಗೆ, ತಂದೆಗೆ ಹೊಸ ಕೆಲಸ ಸಿಕ್ಕಿದೆ. ಅದರ ಬಗ್ಗೆ ಈ ರೀತಿ ಸರ್ಪ್ರೈಸ್ ನೀಡುವ ಮೂಲಕ ಮಗಳಿಗೆ ಹೇಳಲು ಬಯಸಿದ್ದಾರೆ. ಮೊದಲು ನೀವೂ ಈ ವಿಡಿಯೋ ನೋಡಿ...