ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್ ಶಿಪ್: ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಮೂರು ವಿದ್ಯಾರ್ಥಿಗಳು
ನ್ಯಾಷನಲ್ ಯೋಗಾಸನ ಸ್ಪೋಟ್ರ್ಸ್ ಫೆಡರೇಶನ್ ಮತ್ತು ಡಿಪಾಟ್ಮೆರ್ಂಟ್ ಆಫ್ ಸ್ಪೋಟ್ರ್ಸ್ ಆ್ಯಂಡ್ ಯೂತ್ ಸರ್ವಿಸಸ್ ಒಡಿಶಾ ಸರ್ಕಾರ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಶಿರಗುಪ್ಪಿ ಗ್ರಾಮದ ಮೂರು ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಸಾಧನೆ ಗೈದು ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ನವದೆಹಲಿಯ ರಾಷ್ಟ್ರೀಯ ಯೋಗಾಸನ ಕ್ರೀಡಾ ಸಂಸ್ಥೆಯ ನಿರ್ದೇಶಕ ಭವರ್ ಲಾಲ್ ಆರ್ಯ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಒಡಿಸ್ಸಾದ ಭುವನೇಶ್ವರದಲ್ಲಿ ನ.11 ರಿಂದ 13 ರವರೆಗೆ ರಾಷ್ಟ್ರೀಯ ಯೋಗಸನ ಕ್ರೀಡಾ ಸಂಸ್ಥೆ ಆಯೋಜಿಸಿದ ಎರಡನೇ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದೇಶದ ವಿವಿಧ ಜಿಲ್ಲೆಗಳಿಂದ ಆನ್ಲೈನ್ ಮೂಲಕ 30 ಸಾವಿರ ಯೋಗಾಪಟುಗಳು ಭಾಗವಹಿಸಿದ್ದರು. ಅದರಲ್ಲಿ 600 ವಿದ್ಯಾರ್ಥಿಗಳು ಫೈನಲ್ ಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 5 ಸ್ಪರ್ಧಾ ವಿಭಾಗಗಳಲ್ಲಿ ವಿಜಯಶಾಲಿಗಳಾಗಿದ್ದಾರೆ ಎಂದರು.