ಜನಾಬ್ ಜಬ್ಬಾರ್ ಖಾನ್ ಹೊನ್ನಳ್ಳಿ ಸಾಹೇಬರು ಇಂದು ನಿಧನ

ಜನಾಬ್ ಜಬ್ಬಾರ್ ಖಾನ್ ಹೊನ್ನಳ್ಳಿ ಸಾಹೇಬರು ಇಂದು ನಿಧನ

ಹುಬ್ಬಳ್ಳಿ ಶಹರದ ಮುತ್ಸದ್ದಿ ರಾಜಕಾರಣಿಗಳು , ಮಾಜಿ ಸಚಿವರೂ , ಹಿರಿಯ ಮಾರ್ಗದರ್ಶಕರೂ , ಅಂಜುಮನ್ - ಏ - ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆದ ಜನಾಬ್ ಜಬ್ಬಾರ್ ಖಾನ್ ಹೊನ್ನಳ್ಳಿ ಸಾಹೇಬರು ಇಂದು ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ . ಹುಬ್ಬಳ್ಳಿ ಶಹರದಲ್ಲಿ ಅಭಿವೃದ್ಧಿಯ ಹರಿಕಾರರು , ಬಡವರ ಬಂಧುಗಳೂ ಆಗಿದ್ದ ಜನಾಬ್ ಅವರು ಸಾವಿರಾರು ಆಶ್ರಯ ಮನೆಗಳನ್ನು ನಿರ್ಮಿಸಿ ಅನೇಕ ಬಡವರಿಗೆ ನೆಮ್ಮದಿಯ ಸೂರು ಕಲ್ಪಿಸಿ ನಿಜವಾದ ಆಶ್ರಯದಾತ ಎನಿಸಿದ್ದರು . ಅವರ ಅಗಲಿಕೆಯಿಂದ ಮನಸ್ಸಿಗೆ ಅತ್ಯಂತ ದುಃಖವಾಗಿದ್ದು , ಹುಬ್ಬಳ್ಳಿ ಶಹರ ಹಾಗೂ ಅಲ್ಪಸಂಖ್ಯಾತ ಸಮುದಾಯ ಅವರ ಅಗಲಿಕೆಯಿಂದ ಹಿರಿಯ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡು ಬಡವಾದಂತಾಗಿದೆ . ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ , ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಸಂಖ್ಯಾತ ಅಭಿಮಾನಿ ವರ್ಗಕ್ಕೆ ಆ ಅಲ್ಲಾಹನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.