ಭಾವಿ ಪತಿಯ ಹಿಂಸೆ ಸಹಿಸಲಾಗದೆ ಯುವತಿ ಆತ್ಮಹತ್ಯೆ: ಪ್ರೀ ವೆಡ್ಡಿಂಗ್​ ಫೋಟೋ ಶೂಟಿಂಗ್​ ವೇಳೆ ಆಗಿದ್ದೇನು?

ಭಾವಿ ಪತಿಯ ಹಿಂಸೆ ಸಹಿಸಲಾಗದೆ ಯುವತಿ ಆತ್ಮಹತ್ಯೆ: ಪ್ರೀ ವೆಡ್ಡಿಂಗ್​ ಫೋಟೋ ಶೂಟಿಂಗ್​ ವೇಳೆ ಆಗಿದ್ದೇನು?

ಹುಬ್ಬಳ್ಳಿ: ನೂರಾರು ಕನಸಿನೊಂದಿಗೆ ಒಂದೂವರೆ ತಿಂಗಳ ಹಿಂದಷ್ಟೆ ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವತಿ, ಭಾವಿ ಪತಿಯ ಕಿರುಕುಳ ಸಹಿಲಾಗದೆ ಮದುವೆಗೂ ಮುನ್ನವೇ ದುರಂತ ಅಂತ್ಯ ಕಂಡಿದ್ದಾಳೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಬೇಕಿತ್ತು.

ಇದೀಗ ಶೋಕ ಆವರಿಸಿದೆ.

ಹುಬ್ಬಳ್ಳಿಯ ಪವಿತ್ರಾ(25) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪವಿತ್ರಾಗೆ ಸೆ.1ರಂದು ಹಾವೇರಿಯ ಅಭಿನಂದನ್ ಎಂಬಾತನ ಜತೆ ಎಂಗೇಜ್ಮೆಂಟ್ ಆಗಿತ್ತು‌. ಕಳೆದ ವಾರ ಪವಿತ್ರಾಳನ್ನು ಅಭಿನಂದನ್​ ಪ್ರೀ ವೆಡ್ಡಿಂಗ್ ಫೋಟೋ ಶೂಟಿಂಗ್​ಗೆಂದು ದಾಂಡೇಲಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ವಾಪಸ್​ ಬಂದ ಬಳಿಕ ಅಭಿನಂದನ್​ ತನ್ನ ವರಸೆ ಬದಲಿಸಿದ್ದನಂತೆ.

ಭಾವಿ ಪತ್ನಿಯ ನಡತೆ ಮೇಲೆ ಅಭಿನಂದನ್​ಗೆ ಸಂಶಯ ಮೂಡಿತ್ತು. ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ ಮುಗಿಸಿ ಬಂದಾಗಿನಿಂದ ಪವಿತ್ರಾಗೆ ಅಭಿನಂದನ್​ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ. ಇದರಿಂದ ಮನನೊಂದು ಯುವತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಹುಬ್ಬಳ್ಳಿಯ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪ್ರೀ ವೆಡ್ಡಿಂಗ್​ ಫೋಟೋ ಶೂಟಿಂಗ್​ ವೇಳೆ ಏನಾಯ್ತು? ಆತ ಭಾವಿ ಪತ್ನಿ ಮೇಲೆಯೇ ಅನುಮಾನ ಪಟ್ಟಿದ್ದೇಕೆ ಎಂಬ ಮಾಹಿತಿ ಗೊತ್ತಾಗಿಲ್ಲ.