ಏರೋ ಇಂಡಿಯಾ ಏರ್ ಶೋ : ಯುದ್ಧ ವಿಮಾನದ ಮೇಲಿದ್ದ ಬಜರಂಗಬಲಿ ಚಿತ್ರ ತೆರವು

ಬೆಂಗಳೂರು ; ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಏರೋ ಶೋದಲ್ಲಿ ಯುದ್ಧ ವಿಮಾನದ ಮೇಲೆ ಅಳವಡಿಸಿದ್ದ ಬಜರಂಗಬಲಿ ಚಿತ್ರ ತೆರವುಗೊಳಿಸಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಏರೋ ಶೋದಲ್ಲಿ HLFT-42 ಯುದ್ಧ ವಿಮಾನದಲ್ಲಿ ಬಜರಂಗಬಲಿ ಚಿತ್ರವನ್ನು ಹಾಕಲಾಗಿತ್ತು.
HAL ತಯಾರಿಸಿರುವ ಮಿನಿ ವಿಮಾನಕ್ಕೆ ಅಂಜನೀಪುತ್ರನ ಬಲ ಸಿಕ್ಕಿದ್ದು, 'ಮಾರುತ್' ಹೆಸರಿನ HLFT-42 ವಿಮಾನದ ಮೇಲೆ ಗದೆ ಹಿಡಿದು ಹಾರುತ್ತಿರೋ ಆಂಜನೇಯನ ಚಿತ್ರ ಮುದ್ರಣ ಮಾಡಲಾಗಿದ್ದು, ಭಜರಂಗಬಲಿಯ ಚಿತ್ರ ವಿಮಾನದ ಮೇಲೆ ರಾರಾಜಿಸಿತ್ತು.